
ಸಹರಾನ್‌ಪುರ (ಉತ್ತರಪ್ರದೇಶ): 10 ವರ್ಷಗಳ ಹಿಂದೆ ಭೂ ವಿವಾದ ಸಂಬಂಧ ಇಬ್ಬರು ಸಹೋದರರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ಒಂದೇ ಕುಟುಂಬದ 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿಕಾಸ್ ಗುಪ್ತಾ ನೇತೃತ್ವದ ನ್ಯಾಯಪೀಠವು ಅಪರಾಧಿಗಳಿಗೆ ₹10.73 ಲಕ್ಷ ದಂಡ ವಿಧಿಸಿದೆ ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ (ಎಡಿಜಿಸಿ) ದೀಪಕ್ ಸೈನಿ ತಿಳಿಸಿದ್ದಾರೆ.
ನ್ಯಾಯಾಲಯವು ಶಿಕ್ಷೆ ವಿಧಿಸಿದ 13 ಆರೋಪಿಗಳ ಪೈಕಿ ಮುನಾವರ್, ಮುಸ್ತಫಾ, ಸನಾವರ್ ಮತ್ತು ಸ್ಟಾಕೀಮ್ ನಾಲ್ವರು ಸಹೋದರರು. ಇವರೆಲ್ಲರೂ ಸುಬ್ಬಾ ಅವರ ಪುತ್ರರು. ಮುಸ್ತಫಾ ಅವರ ಇಬ್ಬರು ಪುತ್ರರಾದ ಶೌಕೀನ್ ಮತ್ತು ಮೊಹ್ಸಿನ್ ಅವರಿಗೂ ಶಿಕ್ಷೆ ವಿಧಿಸಲಾಗಿದೆ.
ಅನ್ವರ್, ಇಸ್ಲಾಂ, ಗುಲ್ಜಾರ್, ಜಮ್ಶೆಡ್, ಪರ್ವೇಜ್, ಅನ್ವರ್ ಮತ್ತು ಶಕೀಬ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಇತರ ಅಪರಾಧಿಗಳು.
2016ರ ನವೆಂಬರ್ 12ರಂದು ಇಸ್ರಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಭೂ ವಿವಾದದ ಹಿನ್ನೆಲೆಯಲ್ಲಿ ಇಸ್ರಾರ್ ಅವರ ತಂದೆ ಯಾಸಿನ್ ಮತ್ತು ಚಿಕ್ಕಪ್ಪ ತಾಸಿನ್ ಅವರನ್ನು ಜನರ ಗುಂಪೊಂದು ಹತ್ಯೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.