ADVERTISEMENT

ಕಕ್ಷಿದಾರರ ಪ್ರಕರಣ: ವಕೀಲರೇ ಆರ್‌ಟಿಐನಡಿ ಮಾಹಿತಿ ಕೇಳುವಂತಿಲ್ಲ–ಕೇಂದ್ರ

ಕೇಂದ್ರ ಮಾಹಿತಿ ಆಯೋಗ ಸ್ಪಷ್ಟನೆ

ಪಿಟಿಐ
Published 18 ಜನವರಿ 2026, 15:56 IST
Last Updated 18 ಜನವರಿ 2026, 15:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಕಕ್ಷಿದಾರರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲರು ಮಾಹಿತಿ ಹಕ್ಕು ಆಯೋಗದ (ಆರ್‌ಟಿಐ)  ಅಡಿಯಲ್ಲಿ ಮಾಹಿತಿ ಕೋರುವಂತಿಲ್ಲ. ಪಾರದರ್ಶಕತೆ ಕಾನೂನನ್ನು ಈ ರೀತಿ ಬಳಸುವುದರಿಂದ, ಅದರ ಮೂಲ ಉದ್ದೇಶವೇ ವಿಫಲವಾಗುತ್ತದೆ’ ಎಂದು ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ತಿಳಿಸಿದೆ.

ಹರಿಯಾಣದ ಜವಾಹರ್‌ ನವೋದಯ ವಿದ್ಯಾಲಯಕ್ಕೆ ಹಣ್ಣು ಹಾಗೂ ತರಕಾರಿ ಪೂರೈಕೆ ಗುತ್ತಿಗೆ ರದ್ದತಿ ಕುರಿತು ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ವಕೀಲರು ಸಲ್ಲಿಸಿದ ಎರಡನೇ ಮೇಲ್ಮನವಿಯನ್ನು ವಜಾಗೊಳಿಸಿ ಸಿಐಸಿ ಆಯುಕ್ತ ಸುಧಾ ರಾಣಿ ರೆಲಂಗಿ ಅವರು ಈ ಆದೇಶ ನೀಡಿದ್ದಾರೆ.

ಪ್ರತಿವಾದಿಯು ಸಾರ್ವಜನಿಕ ಪ್ರಾಧಿಕಾರಕ್ಕೆ ತರಕಾರಿ ಹಾಗೂ ಹಣ್ಣು ಪೂರೈಸುತ್ತಿದ್ದ ಅವರ ಸಹೋದರನ ಪರವಾಗಿ ಮಾಹಿತಿ ಕೋರಿದ್ದರು. ಪೂರೈಕೆದಾರರೇ, ಯಾವ ಕಾರಣಕ್ಕಾಗಿ ಮಾಹಿತಿ ಕೋರಿರಲಿಲ್ಲ ಎಂಬುದರ ಕುರಿತು ಅರ್ಜಿದಾರರು ಸರಿಯಾದ ವಿವರಣೆ ನೀಡಿಲ್ಲ. ಮೇಲ್ಮನವಿದಾರರು ತನ್ನ ಕಕ್ಷಿದಾರರ ಪರವಾಗಿ ಮಾಹಿತಿ ಕೋರಿದ್ದು, ಅದಕ್ಕೆ ಕಾನೂನು ಅನುಮತಿ ನೀಡುವುದಿಲ್ಲ’ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ವಕೀಲರಾಗಿ ಕೆಲಸ ಮಾಡುತ್ತಿರುವವರು ತಮ್ಮ ಕಕ್ಷಿದಾರರ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆರ್‌ಟಿಐನಡಿ ಕೋರುವಂತಿಲ್ಲ’  ಮದ್ರಾಸ್‌ ಹೈಕೋರ್ಟ್‌ ತೀರ್ಪು ಇದೇ ವೇಳೆ ಅವರು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.