ADVERTISEMENT

ಉಗ್ರ ಹಫೀಜ್ ಸೈಯದ್‌‌ಗೆ 5 ವರ್ಷ ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್

ಏಜೆನ್ಸೀಸ್
Published 12 ಫೆಬ್ರುವರಿ 2020, 12:53 IST
Last Updated 12 ಫೆಬ್ರುವರಿ 2020, 12:53 IST
ಎಲ್ ಇಟಿ ಉಗ್ರ ಹಫೀಜ್ ಸೈಯದ್‌‌ಗೆ ಐದು ವರ್ಷ ಶಿಕ್ಷೆ
ಎಲ್ ಇಟಿ ಉಗ್ರ ಹಫೀಜ್ ಸೈಯದ್‌‌ಗೆ ಐದು ವರ್ಷ ಶಿಕ್ಷೆ   

ಇಸ್ಲಮಾಬಾದ್: ಇದೇ ಮೊದಲ ಬಾರಿಗೆ ಉಗ್ರನೊಬ್ಬನಿಗೆ ಪಾಕಿಸ್ತಾನ ನ್ಯಾಯಾಲಯ ಐದು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

2008ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಉಗ್ರ ಸಂಘಟನೆ ಎಲ್‌‌ಇಟಿಗೆ ಬೆನ್ನುಲುಬಾಗಿ ನಿಂತಿದ್ದನೆನ್ನಲಾದ ಉಗ್ರ ಹಫೀಜ್ಸೈಯದ್ ಶಿಕ್ಷೆಗೆ ಒಳಗಾದವನು. ಈತನ ವಿರುದ್ಧಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ಪ್ರಧಾನಿಇಮ್ರಾನ್ ಖಾನ್ ಮೂರು ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದ್ದರು.

ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡ ಬಗ್ಗೆ ವರದಿಯಾಗಿರಲಿಲ್ಲ. ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವುದೂ ಸೇರಿದಂತೆ ಎರಡು ಪ್ರಕರಣಗಳಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಬುಧವಾರ ಶಿಕ್ಷೆ ವಿಧಿಸಿದೆ.

ADVERTISEMENT

ಪಾಕಿಸ್ತಾನದಲ್ಲಿ ಉಗ್ರರು ಅಕ್ರಮ ವ್ಯವಹಾರ ನಡೆಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ಸ್ಥಿತಿ ಹದೆಗೆಡುವಂತೆ ಮಾಡುತ್ತಾರೆ ಎಂದು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್ ) ವರದಿ ನೀಡಿತ್ತು. ಅಲ್ಲದೆ,'ಗ್ರೇ' ಪಟ್ಟಿಯಲ್ಲಿ ಪಾಕಿಸ್ತಾನ ಹೆಸರು ಸೇರಿಸಲು ತೀರ್ಮಾನಿಸಿತು. ಈ ಬೆಳವಣಿಗೆಗಳ ಬೆನ್ನಲ್ಲೇ ಪಾಕಿಸ್ತಾನ ನ್ಯಾಯಾಲಯದಿಂದ ಈ ತೀರ್ಪು ಹೊರಬಿದ್ದಿದೆ.

ಯಾವ ರಾಷ್ಟ್ರ ಉಗ್ರರಿಗೆಆಶ್ರಯ ನೀಡಿ, ಉಗ್ರರಿಗೆ ಹಣಕಾಸಿನ ನೆರವು ನೀಡುತ್ತದೆಯೋ ಅಂತಹ ರಾಷ್ಟ್ರಗಳ ಹೆಸರನ್ನು ಎಫ್‌‌ಎಟಿಎಫ್ ಸಂಸ್ಥೆ 'ಗ್ರೇ' (ಬೂದು) ಬಣ್ಣದ ಪಟ್ಟಿಯಲ್ಲಿ ಸೇರಿಸುತ್ತದೆ. ಸಂಸ್ಥೆ ಈ ಕ್ರಮಕ್ಕೆ ಮುಂದಾದ ಕಾರಣ ಪಾಕಿಸ್ತಾನ ಎರಡು ಪ್ರಕರಣಗಳಲ್ಲಿಉಗ್ರನಿಗೆ ನ್ಯಾಯಾಲಯದಿಂದ ಶಿಕ್ಷೆ ನೀಡುವಂತೆ ಮಾಡಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.