ADVERTISEMENT

ಪಾಕ್‌ನಿಂದ ಹತ್ಯೆಯಾದವರಿಗೆ ಗೌರವಾರ್ಪಣೆ | 1971ರ ಯುದ್ಧ ಅತ್ಯಂತ ಭಯಾನಕ: ಭಾರತ

ಪಿಟಿಐ
Published 9 ಡಿಸೆಂಬರ್ 2020, 8:26 IST
Last Updated 9 ಡಿಸೆಂಬರ್ 2020, 8:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: 1971ರಲ್ಲಿ ಪಾಕಿಸ್ತಾನದ ಜೊತೆ ನಡೆದ ಯುದ್ಧ ಮಾನವ ಕುಲದ ಇತಿಹಾಸದಲ್ಲಿಯೇ ಅತ್ಯಂತ ಭಯಾನಕ ಘಟನೆ. ಲಕ್ಷಾಂತರ ಜನರನ್ನು ಹತ್ಯೆ ಮಾಡಿದ ಪಾಕಿಸ್ತಾನ ಸೇನೆ, ಸಹಸ್ರಾರು ಜನ ಮಹಿಳೆ ಮೇಲೆ ಅತ್ಯಾಚಾರ ಎಸಗಿತು ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯು ಪ್ರತಿ ವರ್ಷ ಡಿಸೆಂಬರ್‌ 9ರಂದು ‘ನರಮೇಧದಲ್ಲಿ ಸಂತ್ರಸ್ತರ ಅಂತರರಾಷ್ಟ್ರೀಯ ದಿನ’ ಹಮ್ಮಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಈ ಟ್ವೀಟ್‌ ಮಾಡಿದ್ದು, ಈ ಎಲ್ಲ ಸಂತ್ರಸ್ತರಿಗೆ ಗೌರವಾರ್ಪಣೆ ಸಲ್ಲಿಸುವಂತೆ ಕೋರಿದ್ದಾರೆ.

1971ರ ಮಾರ್ಚ್‌ 25ರ ಮಧ್ಯರಾತ್ರಿ ಆಗಿನ ಪೂರ್ವ ಪಾಕಿಸ್ತಾನದ (ಈಗ ಬಾಂಗ್ಲಾದೇಶ) ಮೇಲೆ ಪಾಕಿಸ್ತಾನದ ಪಡೆಗಳು ಹಠಾತ್‌ ದಾಳಿ ಮಾಡಿದವು. ಕೊನೆಗೆ ಅದೇ ವರ್ಷದ ಡಿಸೆಂಬರ್‌ 16ರಂದು ಪಾಕಿಸ್ತಾನ ಸೋಲನ್ನು ಒಪ್ಪಿಕೊಂಡು ಶರಣಾಯಿತು. 9 ತಿಂಗಳ ಕಾಲ ನಡೆದ ಈ ಯುದ್ಧದಲ್ಲಿ 30 ಲಕ್ಷ ಜನರು ಹತರಾದರು.

ADVERTISEMENT

‘1971ರ ಯುದ್ಧದಲ್ಲಿ 30 ಲಕ್ಷ ಜನರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಯೋಧರು ಹಾಗೂ ಉಗ್ರರು, 2 ಲಕ್ಷಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದರು. ನರಮೇಧದಲ್ಲಿ ಪ್ರಾಣ ಕಳೆದುಕೊಂಡವರಿಗೆ, ಸಂತ್ರಸ್ತರಿಗೆ ಎಲ್ಲರೂ ಗೌರವಾರ್ಪಣೆ ಸಲ್ಲಿಸಬೇಕು‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.