ADVERTISEMENT

ಮದ್ಯ ಹಗರಣ: ವೈಎಸ್‌ಆರ್‌ಸಿ ಸಂಸದ ಮಿಥುನ್‌ ರೆಡ್ಡಿ ಬಂಧನ

ಪಿಟಿಐ
Published 19 ಜುಲೈ 2025, 23:35 IST
Last Updated 19 ಜುಲೈ 2025, 23:35 IST
<div class="paragraphs"><p>ಬಂಧನ</p></div>

ಬಂಧನ

   

ಅಮರಾವತಿ (ಆಂಧ್ರ ಪ್ರದೇಶ): ಮದ್ಯದ ಹಗರಣಕ್ಕೆ ಸಂಬಂಧಿಸಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸದ ಮಿಥುನ್‌ ರೆಡ್ಡಿ ಅವರನ್ನು ಆಂಧ್ರ ಪ್ರದೇಶ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ವಿಜಯವಾಡಕ್ಕೆ ತೆರಳಿದ್ದ ಮಿಥುನ್‌ ರೆಡ್ಡಿ, ಎಸ್‌ಐಟಿ ನಡೆಸಿದ ವಿಚಾರಣೆ ಎದುರಿಸಿದರು. ಹಲವು ಗಂಟೆ ವಿಚಾರಣೆಗೆ ಒಳಪಡಿಸಿದ ನಂತರ, ರಾತ್ರಿ 7.30ಕ್ಕೆ ಅವರನ್ನು ಎಸ್‌ಐಟಿ ಬಂಧಿಸಿತು.

ADVERTISEMENT

ಮಿಥುನ್‌ ರೆಡ್ಡಿ ಅವರು ರಾಜಮ್‌ಪೇಟ್ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಹಿಂದಿನ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ₹3,200 ಕೋಟಿ ಹಗರಣ ಇದಾಗಿದೆ.

ಹಗರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ಧನಂಜಯ ರೆಡ್ಡಿ, ಕೃಷ್ಣಮೋಹನ ರೆಡ್ಡಿ ಹಾಗೂ ಬಾಲಾಜಿ ಗೋವಿಂದಪ್ಪ ಅವರನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.