ಮೋದಿ
ನರೇಂದ್ರ ಮೋದಿ ದೇಶ ಉದ್ದೇಶಿಸಿ ಭಾಷಣ...
ದೇಶದ ಜನರು ವಿವಿಧ ತೆರಿಗೆಗಳಿಂದ ಬೇಸತ್ತಿದ್ದರು. ಇದೀಗ ಜಿಎಸ್‌ಟಿ ಸುಧಾರಣೆಯಿಂದ ಅವರಿಗೆ ಸಾಕಷ್ಟು ಅನುಕೂಲವಾಗಲಿದೆ.
ಮಧ್ಯಮ ವರ್ಗ ಹಾಗೂ ಕೆಳ ಮದ್ಯಮ ವರ್ಗದವರಿಗೆ ಬಾರಿ ಅನುಕೂಲತೆಯನ್ನು ಮಾಡಲಾಗಿದೆ.
2014ರಲ್ಲಿ ನೀವು ನಮಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಇದೆಲ್ಲ ಸಾಧ್ಯವಾಯಿತು.
ನಾಳೆಯಿಂದ ಎಲ್ಲ ವರ್ಷಗದ ಜನರಿಗೆ ಜಿಎಸ್‌ಟಿ ಅನುಕೂಲವಾಗಲಿದೆ
19 ನಿಮಿಷಗಳ ಕಾಲ ಮಾತನಾಡಿದ ಅವರು ಜಿಎಸ್‌ಟಿ, ತೆರಿಗೆ ಮತ್ತು ಆತ್ಮನಿರ್ಭರ ಕುರಿತು ಮಾತನಾಡಿದರು. ದೇಶದ ಜನರು ಸ್ಥಳೀಯ ವಸ್ತುಗಳನ್ನು ಖರೀದಿ ಮಾಡುವ ಮೂಲಕ ದೇಶದ ಬೆಳವಣಿಗೆಗೆ ವೇಗ ನೀಡಬೇಕು ಎಂದು ಹೇಳುವ ಮೂಲಕ ತಮ್ಮ ಭಾಷಣ ಮುಗಿಸಿದರು...
ಭಾರತವು 2017ರಲ್ಲಿ ಜಿಎಸ್‌ಟಿ ಆರಂಭಿಸಿದಾಗ ಇತಿಹಾಸದಲ್ಲಿ ಹೊಸ ಬದಲಾವಣೆಯೊಂದು ಆರಂಭವಾಯಿತು. ಇದು ‘ಒಂದು ದೇಶ – ಒಂದು ತೆರಿಗೆ’ಯ ಕನಸನ್ನು ನನಸಾಗಿಸಿತು ಎಂದಿದ್ದಾರೆ.
'ನಾನು ಸ್ಥಳೀಯ, ಇದು ಸ್ಥಳೀಯ' - ಮೋದಿಯ ಹೊಸ ಘೋಷಣೆ
ಇಂದು ಎಷ್ಟೋ ವಿದೇಶಿ ವಸ್ತುಗಳು ನಮ್ಮ ದೈನಂದಿನ ಜೀವನದ ಭಾಗವಾಗಿಬಿಟ್ಟಿವೆ. ನಾವು ಮೊದಲು ಇವುಗಳಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳಬೇಕು. ನಾವು ಖರೀದಿಸಬೇಕಿರುವುದು ಸ್ಥಳೀಯ ಉತ್ಪನ್ನಗಳನ್ನು, ಭಾರತದಲ್ಲೇ ತಯಾರಾದ, ನಮ್ಮದೇ ಜನರ ಬೆವರಿನಿಂದ ಸಿದ್ಧವಾದ ವಸ್ತುಗಳನ್ನು," ಎಂದರು.
₹ 12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿರುವುದು ಬಹುಪಾಲು ಜನರಿಗೆ ಡಬಲ್ ದಮಾಕ. ಹಬ್ಬದ ಋತುವಿನಲ್ಲಿ ಎಲ್ಲರ ಸಂತೋಷವು ಜಾಸ್ತಿಯಾಗಲಿದೆ ಎಂದು ತಿಳಿಸಿದ್ದಾರೆ.
ದೇಶದ ಅಭಿವೃದ್ಧಿಯಲ್ಲಿ ಎಲ್ಲಾ ರಾಜ್ಯಗಳು ಕೂಡ ಸಮಪಾಲು ಹೊಂದಿವೆ. ‘ಆತ್ಮನಿರ್ಭರ ಭಾರತ’ ಅಡಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಿ ಮತ್ತು ಸ್ವದೇಶಿ ಅಭಿಯಾನವನ್ನು ಜಾರಿಯಲ್ಲಿರಿಸಿ. ಜನರು ಕೂಡ ಸ್ವದೇಶಿ ವಸ್ತುಗಳನ್ನು ಬಳಸಿ ಎಂದು ಕಿವಿಮಾತು ಹೇಳಿದ್ದಾರೆ.
ನವರಾತ್ರಿ ದಿನದ ಮೊದಲ ಸೂರ್ಯೋದಯದಿಂದಲೇ ಮುಂದಿನ ಪೀಳಿಗೆಯ ಜಿಎಸ್‌ಟಿ ಆರಂಭವಾಗಲಿದೆ. ಇದು ಕೇವಲ ಆಚರಣೆಯ ಸಮಯವಲ್ಲ, ಆರ್ಥಿಕ ಅಭಿವೃದ್ಧಿ ಮತ್ತು ತೆರಿಗೆ ಸುಧಾರಣೆಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.