ADVERTISEMENT

ಲಾಕ್‌ಡೌನ್ ಮಾರ್ಗಸೂಚಿ: ಏಪ್ರಿಲ್ 20ರಿಂದ ಕೃಷಿ, ಗ್ರಾಮೀಣ ಕೈಗಾರಿಕೆಗಳಿಗೆ ಅವಕಾಶ

ಏಜೆನ್ಸೀಸ್
Published 15 ಏಪ್ರಿಲ್ 2020, 5:33 IST
Last Updated 15 ಏಪ್ರಿಲ್ 2020, 5:33 IST
ಹೊಲದಲ್ಲಿ ಉಳುಮೆ ಮಾಡುತ್ತಿರುವ ರೈತರು– ಸಾಂಕೇತಿಕ ಚಿತ್ರ
ಹೊಲದಲ್ಲಿ ಉಳುಮೆ ಮಾಡುತ್ತಿರುವ ರೈತರು– ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಇನ್ನೂ19 ದಿನಗಳು ಲಾಕ್‌ಡೌನ್‌ ವಿಸ್ತರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಘೋಷಿಸಿದ್ದು, ಬುಧವಾರ ಸರ್ಕಾರ ಲಾಕ್‌ಡೌನ್‌ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಏಪ್ರಿಲ್‌ 20ರ ನಂತರ ಕೃಷಿ ಚಟುವಟಿಕೆಗಳು, ಐಟಿ, ಇ–ಕಾಮರ್ಸ್‌ ಹಾಗೂ ಅಂತರರಾಜ್ಯ ಸಾರಿಗೆಗೆ ಅವಕಾಶ ನೀಡುವುದಾಗಿ ತಿಳಿಸಿದೆ.

ಕೋವಿಡ್‌–19 ಹಾಟ್‌ಸ್ಪಾಟ್‌ ಅಲ್ಲದ ಪ್ರದೇಶಗಳಲ್ಲಿ ಏಪ್ರಿಲ್‌ 20ರ ನಂತರ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಸಂಗ್ರಹಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕೆಲವು ಮಂಡಿ, ಮಾರುಕಟ್ಟೆಗಳು ಕಾರ್ಯಾಚರಿಸಲಿವೆ ಹಾಗೂ ಕೃಷಿ ಚಟುವಟಿಕೆಗಳನ್ನು ನಡೆಸಬಹುದಾಗಿದೆ.

ಹಾಲು, ಹಾಲು ಉತ್ಪನ್ನಗಳು, ಕೋಳಿ ಸಾಗಣೆ, ಟೀ, ಕಾಫಿ ಹಾಗೂ ರಬ್ಬರ್‌ ತೋಟಗಳಲ್ಲಿ ಚಟುವಟಿಕೆಗಳು ಮತ್ತೆ ಆರಂಭಗೊಳ್ಳಲಿವೆ.

ADVERTISEMENT

ಗ್ರಾಮೀಣ ಭಾಗಗಳಲ್ಲಿ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯಗಳಿಗೆ ಮುಂದುವರಿಸಲು ಅವಕಾಶ ಸಿಗಲಿದೆ. ಗ್ರಾಮೀಣ ಭಾಗಗಳಲ್ಲಿ ಕೈಗಾರಿಕೆಗಳು, ಆಹಾರ ಸಂಸ್ಕರಣ ಕೇಂದ್ರಗಳ ಕಾರ್ಯಾಚರಣೆಗೆ ಅವಕಾಶ;ಕಟ್ಟಡ ಮತ್ತು ಕೈಗಾರಿಕಾ ಯೋಜನೆಗಳು; ಜಲ ಸಂರಕ್ಷಣೆ ಮತ್ತು ನೀರಾವರಿ ಯೋಜನೆಗಳಲ್ಲಿ ನರೇಗಾ ಅಡಿ ಕೆಲಸ;ಗ್ರಾಮೀಣ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಕಾರ್ಯಾಚರಿಸಬಹುದಾಗಿದೆ.

ಐಟಿ ಹಾರ್ಡ್‌ವೇರ್‌ ಹಾಗೂ ಅತ್ಯಗತ್ಯ ವಸ್ತುಗಳ ತಯಾರಿಕೆ, ಪ್ಯಾಕೇಜಿಂಗ್‌ ಕಾರ್ಯಗಳು ಪುನರಾರಂಭಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.