ADVERTISEMENT

ಲೋಕೊ ಪೈಲಟ್‌ಗಳ ಉಪವಾಸ ಮುಷ್ಕರ; ರೈಲ್ವೆ ಸಚಿವರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 16:09 IST
Last Updated 1 ಡಿಸೆಂಬರ್ 2025, 16:09 IST
   

ನವದೆಹಲಿ: ತಮ್ಮ ಬೇಡಿಕೆಗಳ ಬಗ್ಗೆ ಸಚಿವಾಲಯವು ಹೊಂದಿರುವ ‘ಉದಾಸೀನತೆ’ ಖಂಡಿಸಿ, ಡಿ. 2ರ ಬೆಳಿಗ್ಗೆ 10 ಗಂಟೆಯಿಂದ ದೇಶದಾದ್ಯಂತ 48 ಗಂಟೆ ಉಪವಾಸ ಮುಷ್ಕರ ನಡೆಸುವುದಾಗಿ ಲೋಕೊ ಪೈಲಟ್‌ಗಳ ಒಕ್ಕೂಟವು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಪತ್ರ ಬರೆದಿದೆ.

ನಿತ್ಯದ ಕರ್ತವ್ಯಕ್ಕೆ ಎಂಟು ಗಂಟೆಗಳ ಮಿತಿ, 46 ಗಂಟೆಯ ವಾರದ ರಜೆ, ವಾರದಲ್ಲಿ ನಿರಂತರವಾಗಿ ನಾಲ್ಕು ದಿನ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಬದಲು ಎರಡು ದಿನವಷ್ಟೇ ಕೆಲಸ ಮಾಡುವುದು ಸೇರಿದಂತೆ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಅಖಿಲ ಭಾರತ ಲೋಕೊ ರನ್ನಿಂಗ್‌ ಸ್ಟಾಫ್‌ ಅಸೋಸಿಯೇಷನ್‌ ತನ್ನ ಪತ್ರದಲ್ಲಿ ಒತ್ತಾಯಿಸಿದೆ.

‘ಈ ಉಪವಾಸ ಮುಷ್ಕರವು ದಂಗೆಯಲ್ಲ. ನ್ಯಾಯಸಮ್ಮತ ಕೂಗು. ನೋವಿನ ಅಭಿವ್ಯಕ್ತಿ. ಪ್ರತಿ ಬಿಕ್ಕಟ್ಟಿನ ಸಂದರ್ಭದಲ್ಲೂ ಅಸೋಸಿಯೇಷನ್‌ ರೈಲ್ವೆ ಆಡಳಿತದ ಪರವಾಗಿ ನಿಂತಿದೆ. ಕಠಿಣ ಪರಿಸ್ಥಿತಿಯಲ್ಲಿಯೂ ದೇಶದ ಜೀವನಾಡಿಯನ್ನು ಮುಂದುವರಿಸಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸಿ ಜೇಮ್ಸ್‌ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಸತೀಶ್‌ ಕುಮಾರ್‌ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.