ADVERTISEMENT

ಲೋಕಸಭೆ: ‘ವಲಸೆ ಮತ್ತು ವಿದೇಶಿಯರ ಮಸೂದೆ 2025’ ಅಂಗೀಕಾರ

ಪಿಟಿಐ
Published 27 ಮಾರ್ಚ್ 2025, 15:43 IST
Last Updated 27 ಮಾರ್ಚ್ 2025, 15:43 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ವಲಸೆ ಮತ್ತು ವಿದೇಶಿಯರ ಮಸೂದೆ 2025’ ಅನ್ನು ಲೋಕಸಭೆಯು ಗುರುವಾರ ಅಂಗೀಕರಿಸಿತು.

‘ದೇಶದ ಭದ್ರತೆ ಮತ್ತು ಆರ್ಥಿಕತೆಯನ್ನು ಬಲಪಡಿಸಲು, ಉತ್ಪಾದನೆ– ವ್ಯಾಪಾರವನ್ನು ಉತ್ತೇಜಿಸಲು, ಶಿಕ್ಷಣ ವ್ಯವಸ್ಥೆಗೆ ಜಾಗತಿಕ ಮನ್ನಣೆ ಪಡೆಯಲು ಹಾಗೂ ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ಮಾನ್ಯತೆಯನ್ನು ಪಡೆಯಲು ಈ ಮಸೂದೆಯು ಸಹಾಯಕವಾಗುತ್ತದೆ. ಅಲ್ಲದೇ ದೇಶದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಪ್ರೋತ್ಸಾಹಿಸುತ್ತದೆ’ ಎಂದು ಮಸೂದೆಯನ್ನು ಮಂಡಿಸಿದ ಗೇಹ ಸಚಿವ ಅಮಿತ್‌ ಶಾ ಹೇಳಿದರು. 

ಮಸೂದೆ ಮೇಲಿನ ಚರ್ಚೆಯಲ್ಲಿ ಉತ್ತರಿಸಿದ ಅವರು, ‘ಭಾರತಕ್ಕೆ  ಭೇಟಿ ನೀಡುವ ಪ್ರತಿಯೊಬ್ಬ ವಿದೇಶಿಗನ ಕುರಿತು ದೇಶವು ನವೀಕೃತ ಮಾಹಿತಿಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಅಲ್ಲದೇ ಭಾರತಕ್ಕೆ ಭೇಟಿ ನೀಡುವ ವ್ಯಕ್ತಿಯ ಉದ್ದೇಶ ಹಾಗೂ ಎಷ್ಟು ಸಮಯ ಆತ ದೇಶದಲ್ಲಿರುತ್ತಾನೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ವಿದೇಶಿಯರ ವಿವರಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ’ ಎಂದು ತಿಳಿಸಿದರು. 

ADVERTISEMENT

ವಿರೋಧ ಪಕ್ಷಗಳ ಸದಸ್ಯರ ತಿದ್ದುಪಡಿಗಳನ್ನು ತಿರಸ್ಕರಿಸಲಾಯಿತು. ಧ್ವನಿ ಮತದ ಮೂಲಕ ಮಸೂದೆಯನ್ನ ಅಂಗೀಕರಿಸಲಾಯಿತು. 

ಅಮಿತ್‌ ಶಾ 
ವ್ಯಾಪಾರ ಶಿಕ್ಷಣ ಮತ್ತು ಹೂಡಿಕೆಗಾಗಿ ಭಾರತಕ್ಕೆ ಬರುವವರಿಗೆ ಸ್ವಾಗತ. ಆದರೆ ದೇಶದ ಭದ್ರತೆಗೆ ಧಕ್ಕೆಯನ್ನುಂಟು ಮಾಡಲು ಯತ್ನಿಸುವವರು ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ
ಅಮಿತ್‌ ಶಾ ಕೇಂದ್ರ ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.