ADVERTISEMENT

ಬೆಟ್ಟ ಕುರುಬರಿಗೆ ಎಸ್‌ಟಿ ಸ್ಥಾನಮಾನ: ಲೋಕಸಭೆಯಲ್ಲಿ‌ ಮಸೂದೆ ಅಂಗೀಕಾರ 

ಪಿಟಿಐ
Published 20 ಡಿಸೆಂಬರ್ 2022, 5:02 IST
Last Updated 20 ಡಿಸೆಂಬರ್ 2022, 5:02 IST
ಸಂಸತ್‌ ಭವನ (ಕಡತ ಚಿತ್ರ)
ಸಂಸತ್‌ ಭವನ (ಕಡತ ಚಿತ್ರ)   

ನವದೆಹಲಿ: ಕಾಡು ಕುರುಬರ ಜೊತೆಗೆ ಬೆಟ್ಟ ಕುರುಬರನ್ನೂ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆ ಮಾಡುವ ಕುರಿತ ಮಸೂದೆಯನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ.

‘ಕರ್ನಾಟಕದಲ್ಲಿ ನೆಲೆಸಿರುವ ಬೆಟ್ಟ ಕುರುಬರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ 2022ರ ದಿ ಕಾನ್ಸ್‌ಟಿಟ್ಯೂಷನ್‌ (ಶೆಡ್ಯೂಲ್‌ ಟ್ರೈಬ್‌) ಆರ್ಡರ್‌ (4ನೇ ತಿದ್ದುಪಡಿ) ಮಸೂದೆ ಅಂಗೀಕರಿಸಲಾಗಿದೆ. ಈ ಸಮುದಾಯದವರನ್ನು ಎಸ್‌ಟಿಗೆ ಸೇರ್ಪಡೆ ಮಾಡುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಿಕೊಂಡಿತ್ತು’ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT