ADVERTISEMENT

Waqf Amendment Bill: ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು

ಪಿಟಿಐ
Published 3 ಏಪ್ರಿಲ್ 2025, 2:15 IST
Last Updated 3 ಏಪ್ರಿಲ್ 2025, 2:15 IST
<div class="paragraphs"><p>ಲೋಕಸಭೆಯಲ್ಲಿ ಮಸೂದೆ ಬಗ್ಗೆಯ ಚರ್ಚೆ ನಡೆಯಿತು</p></div>

ಲೋಕಸಭೆಯಲ್ಲಿ ಮಸೂದೆ ಬಗ್ಗೆಯ ಚರ್ಚೆ ನಡೆಯಿತು

   

– ಪಿಟಿಐ

ನವದೆಹಲಿ: ವಿವಾದಿತ ವಕ್ಫ್‌ (ತಿದ್ದುಪಡಿ) ಮಸೂದೆಯ ಬಗ್ಗೆ ಚರ್ಚಿಸಿ, ಮತದಾನ ಪ್ರಕ್ರಿಯೆ ಪೂರ್ಣಗೊಳಿಸಲು ಲೋಕಸಭೆಯು ಗುರುವಾರ ನಸುಕಿನ 1.56ರವರೆಗೂ ಕಲಾಪ ನಡೆಸಿತು.

ADVERTISEMENT

ವಕ್ಫ್‌ ಮಸೂದೆಯ ಕುರಿತಾಗಿ ಹಾಗೂ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದಕ್ಕೆ ಅನುಮತಿ ನೀಡುವ ಸಲುವಾಗಿ ಸದನದಲ್ಲಿ 15 ತಾಸು 41 ನಿಮಿಷಗಳ ಕಾಲ ಕಲಾಪ ನಡೆಯಿತು.

ವಕ್ಫ್‌ ತಿದ್ದುಪಡಿ ಮಸೂದೆಯ ಪರವಾಗಿ ಲೋಕಸಭೆಯಲ್ಲಿ 288 ಮತಗಳು ಚಲಾವಣೆಯಾದವು, ವಿರುದ್ಧವಾಗಿ 232 ಮತಗಳು ಬಿದ್ದವು.  ವಕ್ಫ್‌ ತಿದ್ದುಪಡಿ ಮಸೂದೆ ಕುರಿತ ಚರ್ಚೆ ಹಾಗೂ ಅದರ ಅಂಗೀಕಾರಕ್ಕೆ ನಡೆದ ಮತದಾನವು ಗುರುವಾರ ನಸುಕಿನ 1.56ಕ್ಕೆ ಕೊನೆಗೊಂಡಿತು.

ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರನ್ನು ನೇಮಕ ಮಾಡಬಾರದು ಎಂಬ ತಿದ್ದುಪಡಿಯನ್ನು ಆರ್‌ಎಸ್‌ಪಿ ಸದಸ್ಯ ಎನ್‌.ಕೆ. ಪ್ರೇಮಚಂದ್ರನ್ ಮಂಡಿಸಿದರು. ಆದರೆ ಇದಕ್ಕೆ ಸೋಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.