ADVERTISEMENT

ಲೋಕಸಭೆ ಮಹಾ ಪ್ರಧಾನ ಕಾರ್ಯದರ್ಶಿ ಉತ್ಪಲ್ ಅಧಿಕಾರ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 13:13 IST
Last Updated 2 ಡಿಸೆಂಬರ್ 2024, 13:13 IST
<div class="paragraphs"><p>ಉತ್ಪಲ್‌ ಕುಮಾರ್ ಸಿಂಗ್</p></div>

ಉತ್ಪಲ್‌ ಕುಮಾರ್ ಸಿಂಗ್

   

(ಚಿತ್ರ ಕೃಪೆ– https://sansad.in/)

ನವದೆಹಲಿ: ಲೋಕಸಭೆಯ ಮಹಾ ಪ್ರಧಾನ ಕಾರ್ಯದರ್ಶಿ ಉತ್ಪಲ್‌ ಕುಮಾರ್ ಸಿಂಗ್ ಅವರ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಉತ್ಪಲ್‌ ಅಧಿಕಾರ ಅವಧಿಯನ್ನು 2025ರ ನ.30ರವರೆಗೆ ವಿಸ್ತರಿಸಿ, ಆದೇಶ ಹೊರಡಿಸಿದ್ದಾರೆ.

ADVERTISEMENT

ಉತ್ತರಾಖಂಡ ಕೇಡರ್‌ನ 1986ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಉತ್ಪಲ್‌ 2020ರ ಡಿ.1ರಂದು ಲೋಕಸಭೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಉತ್ಪಲ್‌ ಅವಧಿ ಎರಡನೇ ಬಾರಿ ವಿಸ್ತರಣೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.