ADVERTISEMENT

2019-20ರಲ್ಲಿ ‘ಲೋಕಪಾಲ’ಕ್ಕೆ 1,427 ದೂರು

ಪಿಟಿಐ
Published 17 ಅಕ್ಟೋಬರ್ 2020, 14:51 IST
Last Updated 17 ಅಕ್ಟೋಬರ್ 2020, 14:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ರಚಿಸಲಾಗಿರುವ ಲೋಕಪಾಲ ಸಂಸ್ಥೆಯು 2019–20ರ ಸಾಲಿನಲ್ಲಿ ಒಟ್ಟು 1,427 ದೂರುಗಳನ್ನು ಸ್ವೀಕರಿಸಿದ್ದು, ಇವುಗಳಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳ ವಿರುದ್ಧ 613 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕೃತ ದತ್ತಾಂಶಗಳು ಬಹಿರಂಗಪಡಿಸಿವೆ.

ಕೇಂದ್ರ ಸಚಿವರು ಹಾಗೂ ಸಂಸದರ ವಿರುದ್ಧವೂ ನಾಲ್ಕು ದೂರುಗಳನ್ನು ಸ್ವೀಕರಿಸಲಾಗಿದೆ ಎಂದೂ ತಿಳಿಸಿವೆ‌.

ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧ 245 , ಸಾರ್ವಜನಿಕ ವಲಯಗಳ ಅಧೀನದಲ್ಲಿರುವ ಸಂಸ್ಥೆಗಳ, ನ್ಯಾಯಾಂಗ ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸ್ವಾಯತ್ವ ಸಂಸ್ಥೆಗಳ ವಿರುದ್ಧ 200 ಹಾಗೂ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ 135 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಸಂಸ್ಥೆಯ ದಾಖಲೆಗಳು ಹೇಳಿವೆ.

ADVERTISEMENT

ರಾಜ್ಯ ಸಚಿವರುಗಳು ಹಾಗೂ ಶಾಸಕರ ವಿರುದ್ಧವೂ ಆರು ದೂರುಗಳನ್ನು ಸ್ವೀಕರಿಸಲಾಗಿದ್ದು, 220 ರಷ್ಟು ಮನವಿ, ಸಲಹೆಗಳೂ ಬಂದಿವೆ ಎಂದೂ ಮೂಲಗಳು ತಿಳಿಸಿವೆ.

ಒಟ್ಟು 1,347 ದೂರುಗಳನ್ನು ಇತ್ಯರ್ಥಗೊಳಿಸಲಾಗಿದೆ. 1,152 ದೂರುಗಳು ಲೋಕಪಾಲ ವ್ಯಾಪ್ತಿಯಿಂದ ಹೊರಗಿನವು ಎಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.