ADVERTISEMENT

ಲೊಂಗೆವಾಲಾ ಯುದ್ಧದ ಹೀರೊ ಕುಲದೀಪ್‌ ಚಾಂದಪುರಿ ಇನ್ನಿಲ್ಲ

ಪಿಟಿಐ
Published 17 ನವೆಂಬರ್ 2018, 16:47 IST
Last Updated 17 ನವೆಂಬರ್ 2018, 16:47 IST
ಕುಲದೀಪ್‌ ಸಿಂಗ್‌
ಕುಲದೀಪ್‌ ಸಿಂಗ್‌   

ಚಂಡೀಗಡ:1971ರಲ್ಲಿ ಭಾರತ–ಪಾಕಿಸ್ತಾನ ನಡುವೆ ನಡೆದ ಲೊಂಗೆವಾಲಾ ಯುದ್ಧದ ಹೀರೊ ನಿವೃತ್ತ ಬ್ರಿಗೇಡಿಯರ್‌ ಕುಲದೀಪ್‌ ಸಿಂಗ್‌ ಚಾಂದ್‌ಪುರಿ (78) ನಿಧನರಾದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ವಿಧಿವಶರಾದರು. ಅವರಿಗೆ ಪತ್ನಿ ಮತ್ತು ಮೂವರು ಪುತ್ರರು ಇದ್ದಾರೆ.

ಈ ಯುದ್ಧವನ್ನು ಆಧರಿಸಿ 1997ರಲ್ಲಿ ನಿರ್ಮಿಸಲಾದ ‘ಬಾರ್ಡರ್‌’ ಸಿನಿಮಾದಲ್ಲಿ ಸನ್ನಿ ಡಿಯೋಲ್‌ ಅವರು ಚಾಂದ್‌ಪುರಿ ಅವರ ಪಾತ್ರವನ್ನು ಮಾಡಿದ್ದರು. ರಾಜಸ್ಥಾನ–ಪಾಕಿಸ್ತಾನದ ಗಡಿ ಪ್ರದೇಶ ಲೊಂಗೆವಾಲಾದಲ್ಲಿ ನಡೆದ ಈ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಚಾಂದ್‌ಪುರಿ ಅವರಿಗೆ ಮಹಾವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ADVERTISEMENT

ಭಾರತೀಯ ಸೇನೆಯ 23 ಬೆಟಾಲಿಯನ್‌ ಪಂಜಾಬ್‌ ರೆಜಿಮೆಂಟ್‌ ಅನ್ನು ಚಾಂದ್‌ಪುರಿ ಮುನ್ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.