ADVERTISEMENT

ಕೇಂದ್ರದ ವಿರುದ್ಧ ಟಿಡಿಪಿ ನೋಟಿಸ್‌ ಅಂಗೀಕಾರ: ಅವಿಶ್ವಾಸ ಚರ್ಚೆ ನಾಳೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 20:14 IST
Last Updated 18 ಜುಲೈ 2018, 20:14 IST
   

ನವದೆಹಲಿ(ಪಿಟಿಐ): ಮುಂಗಾರು ಅಧಿವೇಶನದ ಮೊದಲ ದಿನವೇ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ.

ಕಾಂಗ್ರೆಸ್‌, ತೆಲುಗುದೇಶಂ,ಎನ್‌ಸಿಪಿ ಸೇರಿದಂತೆ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ಗೊತ್ತುವಳಿಯ ಮೇಲೆ ಲೋಕಸಭೆಯಲ್ಲಿ ಶುಕ್ರವಾರ ಚರ್ಚೆ ಆರಂಭವಾಗಲಿದೆ.

ವಿರೋಧ ಪಕ್ಷಗಳು ಬುಧವಾರ ಸಲ್ಲಿಸಿದ ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿದ ಅರ್ಜಿಯನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಚರ್ಚೆಗೆ ಅಂಗೀಕರಿಸಿದರು.

ADVERTISEMENT

ಅವಿಶ್ವಾಸ ನಿರ್ಣಯವನ್ನು ನೂರಕ್ಕೆ ನೂರರಷ್ಟು ಸೋಲಿಸುವುದಾಗಿ ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಎನ್‌ಡಿಎ ಮಿತ್ರಪಕ್ಷಗಳು ಒಗ್ಗಟ್ಟಾಗಿದ್ದು ವಿರೋಧ ಪಕ್ಷಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗಿವೆ ಎಂದು ಹೇಳಿದೆ.

ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಬಜೆಟ್‌ ಅಧಿವೇಶನದಲ್ಲಿಯೇ ವಿರೋಧ ಪಕ್ಷಗಳು ನೋಟಿಸ್‌ ಸಲ್ಲಿಸಿದ್ದವು.ಕಲಾಪ ಸುಗಮವಾಗಿ ನಡೆಯದ ಕಾರಣ ಗೊತ್ತುವಳಿ ಚರ್ಚೆಗೆ ಬಂದಿರಲಿಲ್ಲ.

***

ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿಟ್ಟಿರುವಾಗ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಯಾವ ಲೆಕ್ಕ–ಅನಂತಕುಮಾರ್‌ ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.