ADVERTISEMENT

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಮದರಸಾ ಶಿಕ್ಷಕ ಬಂಧನ

ಪಿಟಿಐ
Published 25 ಜೂನ್ 2022, 11:07 IST
Last Updated 25 ಜೂನ್ 2022, 11:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಹರಾನ್‌ಪುರ, ಉತ್ತರ ಪ್ರದೇಶ: ಏಳು ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮದರಸಾದ ಶಿಕ್ಷಕ ಜಮೀರ್‌ ಎಂಬುವವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ (ಗ್ರಾಮೀಣ) ಸೂರಜ್‌ ರೈ ತಿಳಿಸಿದ್ದಾರೆ.

‘ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಜಮೀರ್‌ ಅವರನ್ನು ಬಂಧಿಸಲಾಗಿದೆ. ಅತ್ಯಾಚಾರ ವಿಷಯದ ಬಗ್ಗೆ ಯಾರ ಮುಂದೆಯಾದರೂ ಹೇಳಿದರೆ ಕೊಲ್ಲುವುದಾಗಿಜಮೀರ್‌ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿರುವುದನ್ನು ದೂರಿನಲ್ಲಿ ತಿಳಿಸಲಾಗಿದೆ’ ಎಂದು ಸೂರಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT