ADVERTISEMENT

ಸೆಪ್ಟೆಂಬರ್‌– ಅಕ್ಟೋಬರ್‌ನಲ್ಲಿ ಸ್ಪುಟ್ನಿಕ್‌–ವಿ ಭಾರತದಲ್ಲೇ ತಯಾರಿಕೆ, ವಿತರಣೆ 

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 13:27 IST
Last Updated 27 ಜುಲೈ 2021, 13:27 IST
   

ಹೈದರಾಬಾದ್‌: ದೇಶಿಯವಾಗಿ ತಯಾರಿಸಿದ ರಷ್ಯಾದ ಕೋವಿಡ್‌ -19 ಲಸಿಕೆ ಸ್ಪುಟ್ನಿಕ್–ವಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಲಭ್ಯವಾಗಲಿದೆ ಎಂದು ‘ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್’ ನಿರೀಕ್ಷಿಸಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ರಷ್ಯಾದಲ್ಲಿ ಕೋವಿಡ್‌ ಪ್ರಕರಣಗಳು ಹಠಾತ್ತನೆ ಹೆಚ್ಚಾಗಿವೆ. ಹೀಗಾಗಿ ಸ್ಪುಟ್ನಿಕ್–ವಿ ಲಸಿಕೆಗಳು ಬರುವುದು ವಿಳಂಬವಾಗುತ್ತಿದೆ. ಆಗಸ್ಟ್ ಅಂತ್ಯದ ವೇಳೆಗೆ ಪರಿಸ್ಥಿತಿ ಸರಿಹೋಗಲಿದೆ ಎಂದು ರೆಡ್ಡೀಸ್‌ ಸಂಸ್ಥೆಯ ಬ್ರಾಂಡೆಡ್ ಮಾರ್ಕೆಟ್ಸ್ ವಿಭಾಗದ ಸಿಇಒ ಎಂ.ರಮಣ ಹೇಳಿದ್ದಾರೆ.

‘ಸ್ಥಳೀಯ ತಯಾರಕರು ಪ್ರಸ್ತುತ ತಂತ್ರಜ್ಞಾನವನ್ನು ತಿಳಿಯುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಅಕ್ಟೋಬರ್-ಸೆಪ್ಟೆಂಬರ್ ಅವಧಿಯಲ್ಲಿ ನಾವು ಸ್ಥಳೀಯವಾಗಿ ಸ್ಪುಟ್ನಿಕ್ ತಯಾರಿಸಲಿದ್ದೇವೆ" ಎಂದು ರಮಣ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಭಾರತದಲ್ಲಿ ಸ್ಪುಟ್ನಿಕ್–ವಿ ತಯಾರಿಕೆಗಾಗಿ ಹೈದರಾಬಾದ್‌ ಮೂಲದ ರೆಡ್ಡೀಸ್‌ ಲ್ಯಾಬೊರೇಟರಿ ರಷ್ಯಾದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಸ್ಪುಟ್ನಿಕ್‌ ವಿ ತುರ್ತು ಬಳಕೆಗೆ ಭಾರತ ಸರ್ಕಾರ ಅನುಮತಿಯನ್ನೂ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.