ADVERTISEMENT

ಮಧ್ಯಪ್ರದೇಶ: ಬಿಜೆಪಿ ನೇತಾರನ ಮನೆಯಿಂದ ಮಾರಕಾಸ್ತ್ರ, ಸ್ಫೋಟಕ ವಶ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 12:08 IST
Last Updated 2 ಏಪ್ರಿಲ್ 2019, 12:08 IST
ಕೃಪೆ: ಪಂಜಾಬ್ ಕೇಸರಿ
ಕೃಪೆ: ಪಂಜಾಬ್ ಕೇಸರಿ    

ಭೋಪಾಲ್: ಇಲ್ಲಿನ ಬದ್ವಾನಿ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಶೋಧಕಾರ್ಯಾಚರಣೆಯಲ್ಲಿ ಸ್ಥಳೀಯ ಬಿಜೆಪಿ ನೇತಾರನ ಮನೆಯಿಂದ ಮಾರಕಾಸ್ತ್ರ ಮತ್ತು ಸ್ಫೋಟಕಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಸೆಂಧ್‍ವಾದಲ್ಲಿನ ಬಿಜೆಪಿ ನಾಯಕ ಸಂಜಯ್ ಯಾದವ್ ಅವರ ಮನೆಯಿಂದ 10 ಪಿಸ್ತೂಲ್, 11 ಕಾರ್ಟ್ರಿಜ್ ಮತ್ತು 17 ಬಾಂಬ್‍‍ಗಳನ್ನು ಪೊಲೀಸರು ವಶ ಪಡಿಸಿದ್ದಾರೆ.

ಶಸ್ತ್ರಾಸ್ತ ಕಾಯ್ದೆ ಮತ್ತು ಸ್ಫೋಟಕ ವಸ್ತು ಕಾಯ್ದೆಯಡಿಯಲ್ಲಿ ಯಾದವ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಯಾದವ್ ವಿರುದ್ಧ ಹಲವಾರು ಅಪರಾಧ ಪ್ರಕರಣಗಳಿದ್ದು, ಈ ವ್ಯಕ್ತಿ ತಲೆಮರೆಸಿಕೊಂಡಿದ್ದಾರೆ.

ADVERTISEMENT

ಸಂಜಯ್ ಯಾದವ್ ಅವರ ತಾಯಿ ಬಸಂತಿ ಸ್ಥಳೀಯ ಬಿಜೆಪಿ ನೇತಾರೆ ಮತ್ತು ಸೆಂಧ್‍ವಾ ಮುನ್ಸಿಪಾಲಿಟಿಯ ಅಧ್ಯಕ್ಷೆಯಾಗಿದ್ದಾರೆ.

9ಮಿಮಿ ಉದ್ದದ 6 ಪಿಸ್ತೂಲ್, 32 ಬೋರ್ 2 ಪಿಸ್ತೂಲ್ ಮತ್ತು 7.62 ಮಿಮಿ ಉದ್ದದ ಎರಡು ಪಿಸ್ತೂಲ್‍ಗಳನ್ನು ವಶ ಪಡಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯಂಗ್‍ಚೆನ್ ದೋಲ್ಕರ್ ಭೂಟಿಯಾ ಹೇಳಿದ್ದಾರೆ.

ಮನೆಯ ಅಟ್ಟದ ಮೇಲಿದ್ದ ಕಪಾಟಿನಲ್ಲಿ ಈ ಮಾರಕಾಯುಧಗಳು ಪತ್ತೆಯಾಗಿವೆ. ಈ ಆಯುಧಗಳನ್ನು ಯಾಕೆ ಸಂಗ್ರಹಿಸಿಡಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ.ಆರೋಪಿ ವಿರುದ್ಧ ನಾವು ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ ಭೂಟಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.