ADVERTISEMENT

ಮಧ್ಯಪ್ರದೇಶ: ಮುಂದಿನ ಮಹಾಶಿವರಾತ್ರಿಯಂದು ಉಜ್ಜಯಿನಿ ನಗರಕ್ಕೆ ಸಿಂಗಾರ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 8:21 IST
Last Updated 6 ನವೆಂಬರ್ 2021, 8:21 IST
ಶಿವರಾಜ್‌ ಸಿಂಗ್‌ ಚೌಹಾಣ್‌
ಶಿವರಾಜ್‌ ಸಿಂಗ್‌ ಚೌಹಾಣ್‌   

ಭೋಪಾಲ್‌, ಮಧ್ಯಪ್ರದೇಶ: ಮುಂದಿನ ವರ್ಷದ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶಿವನ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯವಿರುವ ಉಜ್ಜಯಿನಿ ನಗರವನ್ನು ವಿಶೇಷವಾಗಿ ಅಲಂಕರಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಘೋಷಿಸಿದ್ದಾರೆ.

ಮುಂದಿನ ವರ್ಷ ಮಾರ್ಚ್‌ 1 ರಂದು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ.

‘ಉಜ್ಜಯಿನಿ ಒಂದು ಅದ್ಭುತ ನಗರವಾಗಿದ್ದು ಮುಂದಿನ ವರ್ಷದ ಮಹಾಶಿವರಾತ್ರಿಗೂ ಮೊದಲು ಮಹಾಕಾಳ ಶಿವನ ನಗರವನ್ನು ಅಲಂಕರಿಸಲಾಗುವುದು. ಇದು ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದು’ ಎಂದು ಚೌಹಾಣ್‌ ಹೇಳಿದರು.

ADVERTISEMENT

ಉಜ್ಜಯಿನಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಧು–ಸಂತರ ಸನ್ಮಾನ ಕಾರ್ಯಕ್ರಮದಲ್ಲಿ ಚೌಹಾಣ್ ಈ ವಿಷಯ ತಿಳಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.