ಸಾಂದರ್ಭಿಕ ಚಿತ್ರ
ದಾಮೋಹ್: ಆಸ್ಪತ್ರೆಯ ಶವ ಸಾಗಿಸುವ ವಾಹನ ಸಿಗದೆ ವ್ಯಕ್ತಿಯೊಬ್ಬರು ತಮ್ಮ 65 ವರ್ಷದ ತಾಯಿಯ ಮೃತದೇಹವನ್ನು ಆಟೊದಲ್ಲಿ ಸಾಗಿಸಿದ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆ ಶನಿವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು.
‘ಚಿಕಿತ್ಸೆಗಾಗಿ ತಾಯಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆ. ಆದರೆ ದಾರಿ ಮಧ್ಯೆಯೇ ಅಸುನೀಗಿದ್ದಾರೆ ಎಂದು ವೈದ್ಯರು ಘೋಷಿಸಿದರು’ ಎಂದು ಮಹಿಳೆಯ ಪುತ್ರ ನಾರಾಯಣ ಪಟೇಲ್ ತಿಳಿಸಿದ್ದಾರೆ.
ನಾನು ಹಲವು ಬಾರಿ ಮನವಿ ಮಾಡಿದರೂ, ತುಂಬಾ ಸಮಯದವರೆಗೆ ಶವ ಸಾಗಣೆ ವಾಹನ ನೀಡಲಿಲ್ಲ. ಹೀಗಾಗಿ ದ್ವಿಚಕ್ರ ವಾಹನದಲ್ಲಿ ಸಾಗಿಸಲು ಮುಂದಾಗಿದ್ದೆ. ಆದರೆ ಯಾರೋ ಒಬ್ಬರು ಆಟೊ ಮಾಡಿಕೊಟ್ಟರು ಎಂದು ಅವರು ಹೇಳಿದ್ದಾರೆ.
ಘಟನೆಯ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆಸ್ಪತ್ರೆಯ ಸರ್ಜನ್ ರಾಜೇಶ್ ನಾಮ್‌ದೇವ್, ‘ಶವ ಸಾಗಿಸುವ ವಾಹನ ಯಾವತ್ತೂ ಲಭ್ಯ ಇರುತ್ತದೆ. ಆ ದಿನ ಚಾಲಕ ತಡವಾಗಿ ಬಂದಿದ್ದ. ಈ ವೇಳೆ ಕುಟುಂಬಸ್ಥರು ಶವವನ್ನು ತೆಗೆದುಕೊಂಡು ಹೋಗಿದ್ದರು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.