ADVERTISEMENT

ಗುಜರಾತ್‌ನ ಕಚ್‌ನಲ್ಲಿ 4.1 ತೀವ್ರತೆಯ ಭೂಕಂಪನ

ಪಿಟಿಐ
Published 21 ಆಗಸ್ಟ್ 2021, 14:40 IST
Last Updated 21 ಆಗಸ್ಟ್ 2021, 14:40 IST

ಅಹಮದಾಬಾದ್‌: ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಶನಿವಾರ 4.1 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಅದರ ಕೇಂದ್ರಬಿಂದು ಧೋಲವೀರ ಬಳಿ ಇತ್ತು ಎಂದು ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‌ಆರ್) ಹೇಳಿದೆ.

ಮಧ್ಯಮ ತೀವ್ರತೆಯ ಭೂಕಂಪನದಿಂದಾಗಿ ಯಾವುದೇ ಆಸ್ತಿ ಅಥವಾ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಆಗಸ್ಟ್ 4ರಂದು 4.0 ತೀವ್ರತೆಯ ಭೂಕಂಪನ ದಾಖಲಾಗಿತ್ತು. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಕಚ್ ಜಿಲ್ಲೆಯು ಅತಿ ಹೆಚ್ಚಿನ ಅಪಾಯದ ಭೂಕಂಪನ ವಲಯದಲ್ಲಿದೆ. ಈ ಪ್ರದೇಶವು 2001ರಲ್ಲಿ ಭೀಕರ ಭೂಕಂಪನ ಅನುಭವಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.