ADVERTISEMENT

ಬಿಹಾರ ಚುನಾವಣೆಯ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವಿಸ್‌ಗೆ ಕೋವಿಡ್-19 ದೃಢ

ಪಿಟಿಐ
Published 24 ಅಕ್ಟೋಬರ್ 2020, 10:09 IST
Last Updated 24 ಅಕ್ಟೋಬರ್ 2020, 10:09 IST
ದೇವೇಂದ್ರ ಫಡ್ನವಿಸ್‌
ದೇವೇಂದ್ರ ಫಡ್ನವಿಸ್‌   

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್‌ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿರುವುದಾಗಿ ಶನಿವಾರ ತಿಳಿಸಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಲಾಕ್‌ಡೌನ್‌ನಿಂದ ನಾನು ಪ್ರತಿ ದಿನವೂ ಕೆಲಸ ಮಾಡುತ್ತಿದ್ದೇನೆ. ಆದರೆ ಈಗ ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಳ್ಳಬೇಕೆಂದು ದೇವರು ಬಯಸಿದ್ದಾನೆ ಎಂದು ತೋರುತ್ತಿದೆ! ನನಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಮತ್ತು ನಾನೀಗ ಐಸೋಲೇಷನ್‌ನಲ್ಲಿದ್ದೇನೆ. ವೈದ್ಯರ ಸಲಹೆಯ ಮೇರೆಗೆ ಎಲ್ಲ ರೀತಿಯ ಔಷಧ ಮತ್ತು ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಬರೆದಿದ್ದಾರೆ.

ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ಕೋವಿಡ್-19 ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಎಲ್ಲರೂ ಸುರಕ್ಷತೆಯಿಂದಿರಿ! ಎಂದಿದ್ದಾರೆ.

ADVERTISEMENT

ಸದ್ಯ ಬಿಹಾರ ಚುನಾವಣೆಯ ಉಸ್ತುವಾರಿ ವಹಿಸಿರುವ ದೇವೇಂದ್ರ ಫಡ್ನವಿಸ್‌ ಅವರು ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಮೂರು ಹಂತದಲ್ಲಿ ನಡೆಯಲಿರುವ ಬಿಹಾರ ಚುನಾವಣೆ ಅ. 28ರಿಂದ ಆರಂಭವಾಗಲಿದೆ.ಮೊದಲ ಹಂತದಲ್ಲಿ 78 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.