ADVERTISEMENT

‘ಮಹಾಭಾರತ’ ಪೌರಾಣಿಕ ಧಾರಾವಾಹಿಯಲ್ಲಿ ಕರ್ಣನ ಪಾತ್ರ ಮಾಡಿದ್ದ ಪಂಕಜ್‌ ನಿಧನ

ಪಿಟಿಐ
Published 15 ಅಕ್ಟೋಬರ್ 2025, 13:38 IST
Last Updated 15 ಅಕ್ಟೋಬರ್ 2025, 13:38 IST
ಪಂಕಜ್‌ ಧೀರ್‌
ಪಂಕಜ್‌ ಧೀರ್‌   

ಮುಂಬೈ: ಹಿಂದಿಯ ‘ಮಹಾಭಾರತ’ ಪೌರಾಣಿಕ ಧಾರಾವಾಹಿಯಲ್ಲಿ ಕರ್ಣನ ಪಾತ್ರ ನಿರ್ವಹಿಸಿದ್ದ, ಜನಪ್ರಿಯ ನಟ ಪಂಕಜ್‌ ಧೀರ್‌ (68) ಅವರು ಬುಧವಾರ ನಿಧನರಾದರು. 

ಅವರಿಗೆ ಪತ್ನಿ ಅನಿತಾ ಧೀರ್‌ ಹಾಗೂ ಪುತ್ರ ನಿಕಿತಿನ್‌ ಧೀರ್‌ ಇದ್ದಾರೆ.  

‘ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪಂಕಜ್‌ ಅವರು ಕಳೆದ ಹಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ಪಂಕಜ್‌ ಅವರ ಸ್ನೇಹಿತ ಹಾಗೂ ನಿರ್ಮಾಪಕರಾಗಿರುವ ಅಶೋಕ ಪಂಡಿತ್‌ ತಿಳಿಸಿದರು. 

ADVERTISEMENT

ಪಂಜಾಬ್‌ ರಾಜ್ಯದವರಾದ ಪಂಕಜ್‌ ಅವರು 1980ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. 1988ರಲ್ಲಿ ಕಿರುತೆರೆಯ ‘ಮಹಾಭಾರತ’ ಧಾರಾವಾಹಿಯಲ್ಲಿ ಕರ್ಣನ ಪಾತ್ರದ ಮೂಲಕ ಇವರು ಹೆಚ್ಚು ಜನಪ್ರಿಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.