ADVERTISEMENT

ಮಹದಾಯಿ: ಕರ್ನಾಟಕ ವಿರುದ್ಧ ಗೋವಾದಿಂದ ನ್ಯಾಯಾಂಗ ನಿಂದನೆ ಅರ್ಜಿ

Mahadayi dispute: Goa files contempt plea in SC against K'taka

ಪಿಟಿಐ
Published 6 ಅಕ್ಟೋಬರ್ 2020, 11:39 IST
Last Updated 6 ಅಕ್ಟೋಬರ್ 2020, 11:39 IST
1
1   

‍ಪಣಜಿ: ‘ಮಹದಾಯಿ ವಿವಾದ ಕೋರ್ಟ್‌ನಲ್ಲಿದ್ದರೂ ನದಿ ನೀರು ಹರಿಯುವ ದಿಕ್ಕು ಬದಲಿಸಲು ಕರ್ನಾಟಕ ಯತ್ನಿಸುತ್ತಿದೆ ಎಂದು ಆ ರಾಜ್ಯದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಸಲ್ಲಿಸಲಾಗಿದೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ನದಿ ನೀರು ಹರಿಯುವ ತಿರುವು ಬದಲಿಸಲು ಕರ್ನಾಟಕ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ ಎಂಬುದು ಗೋವಾ ಸರ್ಕಾರದ ಆರೋಪ.ನಿಂದನೆ ಅರ್ಜಿ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಾವಂತ್, ‘ಮಹದಾಯಿ ವಿಷಯದಲ್ಲಿ ರಾಜ್ಯದ ಹಕ್ಕು ರಕ್ಷಿಸಲು ನಿರಂತರ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ಮಹದಾಯಿ ನದಿ ನೀರು ಹಂಚಿಕೆ ಕುರಿತು ವಿವಾದವಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೀರು ಹಂಚಿಕೆ ಕುರಿತು ಅಂತರ ರಾಜ್ಯ ಜಲವಿವಾದ ನ್ಯಾಯಮಂಡಳಿಯು 2018ರಲ್ಲಿ ಆದೇಶವನ್ನು ನೀಡಿದೆ. ಆದರೆ, ಇದನ್ನು ಪ್ರಶ್ನಿಸಿ ಮೂರೂ ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.