ADVERTISEMENT

ಜಾರ್ಖಂಡ್‌ನ ನಕ್ಸಲ್‌ ನಾಯಕ ಮಹಾರಾಷ್ಟ್ರದಲ್ಲಿ ಬಂಧನ

ಪಿಟಿಐ
Published 18 ಸೆಪ್ಟೆಂಬರ್ 2022, 12:30 IST
Last Updated 18 ಸೆಪ್ಟೆಂಬರ್ 2022, 12:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಜಾರ್ಖಂಡ್‌ನ ನಕ್ಸಲ್‌ ನಾಯಕ ದೀಪಕ್‌ ಯಾದವ್‌ ಅಲಿಯಾಸ್‌ ಕಾರು ಹುಲಸ್‌ ಯಾದವ್‌ನನ್ನು (45) ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್‌) ಪಾಲ್ಘರ್‌ ಜಿಲ್ಲೆಯಿಂದ ಭಾನುವಾರ ಬಂಧಿಸಿದೆ.

ಜಾರ್ಖಂಡ್‌ನ ಹಜಾರಿಬಾಗ್‌ನ ನಿವಾಸಿಯಾಗಿರುವ ಈತನ ತಲೆಗೆ ₹15 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಜಾರ್ಖಂಡ್‌ನ ಪ್ರಾದೇಶಿಕ ಸಮಿತಿ ಸದಸ್ಯನಾಗಿರುವ ದೀಪಕ್‌ ಯಾದವ್‌, ಕಾಲಿನ ಗಾಯದ ಚಿಕಿತ್ಸೆಗಾಗಿ ಮಾಹಾರಾಷ್ಟ್ರದ ನಲಸೋಪರಕ್ಕೆ ಬಂದಿದ್ದು, ಎರಡು ತಿಂಗಳುಗಳಿಂದ ಅಲ್ಲೇ ಇದ್ದ ಎಂದು ಎಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ. 2004ರಿಂದ ಈತ ಸಿಪಿಐ (ಮಾವೋವಾದಿ) ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂದಿದ್ದಾರೆ.

ADVERTISEMENT

ಈತ ಮಹಾರಾಷ್ಟ್ರಕ್ಕೆ ಬಂದಿರುವ ಕುರಿತು ಠಾಣೆಯ ಎಟಿಎಸ್ ಘಟಕಕ್ಕೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆದಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.