ADVERTISEMENT

ಮಹಾರಾಷ್ಟ್ರ: ಇಂದು ಉದ್ಧವ್ ಠಾಕ್ರೆ ಸೇರಿ 9 ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ

ಏಜೆನ್ಸೀಸ್
Published 18 ಮೇ 2020, 4:11 IST
Last Updated 18 ಮೇ 2020, 4:11 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ   

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿ 9 ಮಂದಿ ವಿಧಾನ ಪರಿಷತ್ ಸದಸ್ಯರುಸೋಮವಾರ ಮಧ್ಯಾಹ್ನ 1 ಗಂಟೆಗೆ ವಿಧಾನಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೇ 14ರಂದು ಒಂಬತ್ತು ಜನ ಅಭ್ಯರ್ಥಿಗಳು ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಖಾಲಿಯಿದ್ದಒಂಬತ್ತು ಸ್ಥಾನಗಳಿಗೆ ಕೇವಲ ಒಂಬತ್ತು ಜನರು ಮಾತ್ರವೇ ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಮತದಾನದ ಫಲಿತಾಂಶವನ್ನು ಅಂದೇ ಘೋಷಿಸಲಾಯಿತು.

ಶಿವಸೇನೆಯಿಂದ ಠಾಕ್ರೆ ಹೊರತಾಗಿ ನೀಲಂ ಗೊರ್ಹೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಗೋಪಿಚಂದ್ ಪಡಲ್ಕರ್, ಪ್ರವಿಣ್ ದಾಟ್ಕೆ, ರಂಜೀತ್‌ಸಿನ್ಹ ಮೋಹಿತ್ ಪಾಟೀಲ್ ಮತ್ತ ರಮೇಶ್ ಕರದ್ ಆಯ್ಕೆಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.