ADVERTISEMENT

ಕೋವಿಡ್: ಮುಂಬೈನಲ್ಲಿ ಸೆಪ್ಟೆಂಬರ್ ತಿಂಗಳ ಕೊನೆವರೆಗೆ ಸೆಕ್ಷನ್ 144 ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 16:16 IST
Last Updated 17 ಸೆಪ್ಟೆಂಬರ್ 2020, 16:16 IST
ಮುಂಬೈ ಪೊಲೀಸ್
ಮುಂಬೈ ಪೊಲೀಸ್   

ಮುಂಬೈ:ಮುಂಬೈನಲ್ಲಿ ಕೊರೊನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಸೆಪ್ಟೆಂಬರ್ 30ರವರೆಗೆ ಸೆಕ್ಷನ್ 144 ವಿಸ್ತರಣೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ದೇಶದಲ್ಲಿ ಲಾಕ್‍‌ಡೌನ್ ಆರಂಭವಾದಂದಿನಿಂದ ಮುಂಬೈ ನಗರದಲ್ಲಿ ಸೆಕ್ಷನ್ 144 ವಿಧಿಸಲಾಗಿತ್ತು.

ಈ ಬಗ್ಗೆ ಟ್ವೀಟ್ ಮಾಡಿದ ಸಚಿವ ಆದಿತ್ಯ ಠಾಕ್ರೆ ಭಯ ಪಡುವ ಅಗತ್ಯವಿಲ್ಲ.ಸೆಕ್ಷನ್ 144 ಸಿಆರ್‌ಪಿಸಿ ಆದೇಶವು ಈ ಹಿಂದೆ ಆಗಸ್ಟ್ 31ರಂದು ಹೊರಡಿಸಿ ಆದೇಶದ ವಿಸ್ತರಣೆಯಾಗಿದೆ. ಮುಂಬೈ ಪೊಲೀಸರು ಹೊಸತಾಗಿ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ ಎಂದಿದ್ದಾರೆ.

ADVERTISEMENT

ಆಗಸ್ಟ್ 31ರ ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಈ ಆದೇಶ ಹೊರಡಿಸಲಾಗಿದೆ.ಪೊಲೀಸರು ಯಾವುದೇ ಹೊಸ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಡಿಸಿಪಿ ಅವರ ಪಿಆರ್‌ಒ ಹೇಳಿದ್ದಾರೆ.

ಆದೇಶದ ಪ್ರಕಾರಅಗತ್ಯ ಚಟುವಟಿಕೆಗಳು, ಅಗತ್ಯ ಸರಕುಗಳ ಪೂರೈಕೆ ಮತ್ತು ವೈದ್ಯಕೀಯ ತುರ್ತುಸ್ಥಿತಿಗಳನ್ನು ಹೊರತುಪಡಿಸಿ 'ಕಂಟೈನ್‌ಮೆಂಟ್ ವಲಯಗಳು' ಎಂದು ಗುರುತಿಸಿದ ಪ್ರದೇಶಗಳಲ್ಲಿ ಒಂದು ಅಥವಾ ಹೆಚ್ಚಿನ ವ್ಯಕ್ತಿಗಳ ಎಲ್ಲಾ ಸಂಚಾರವನ್ನು ನಿಷೇಧಿಸಲಾಗಿದೆ.

ಪಟ್ಟಿ ಮಾಡಲಾದ ತುರ್ತು ಮತ್ತು ತುರ್ತುರಹಿತ ಸೇವೆಗಳನ್ನು ಹೊರತುಪಡಿಸಿ ಒಬ್ಬ ವ್ಯಕ್ತಿ ಅಥವಾ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಸರ್ಕಾರ,ಅರೆ-ಸರ್ಕಾರಿ ಸಂಸ್ಥೆಗಳು ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅನುಮತಿ ಇದೆ.

ಆಹಾರ, ತರಕಾರಿಗಳು, ಪಡಿತರ, ಹಾಲಿನ ಬೂತ್ ಮತ್ತು ಇತರ ಮಳಿಗೆಗಳು ತೆರೆದಿರುತ್ತವೆ. ಬ್ಯಾಂಕಿಂಗ್, ಷೇರು ಮಾರುಕಟ್ಟೆ , ಕ್ಲಿಯರಿಂಗ್ ಕಾರ್ಪೊರೇಷನ್, ಡಿಪಾಸಿಟರಿಗಳು, ಸ್ಟಾಕ್ ಬ್ರೋಕರ್ಗಳು ಮತ್ತು ಸೆಬಿ ನೋಂದಾಯಿತ ಉದ್ಯಮದಲ್ಲಿರುವವರಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.

ಆಸ್ಪತ್ರೆ, ಔಷಧಿ , ಫಾರ್ಮಾ, ಪ್ರಯೋಗಾಲಯಗಳು, ವೈದ್ಯಕೀಯ ನರ್ಸಿಂಗ್ ಕಾಲೇಜುಗಳು ಸಹ ತೆರೆದಿರುತ್ತವೆ.
ಮೇಲಿನ ಸೇವೆಗಳಿಗೆ ಸಂಬಂಧಿಸಿದ ಸರಕುಗಳು ಮತ್ತು ಸಿಬ್ಬಂದಿಗಳನ್ನು ಕರೆದೊಯ್ಯುವ ಟ್ರಕ್‌ಗಳು ಅಥವಾ ಟೆಂಪೊಗಳಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.