ADVERTISEMENT

ಮಹಾ ಕೊರೊನಾ‌: ಉಪಕರಣ ಖರೀದಿಗೆ ಜಿಎಸ್‌‌ಟಿ ವಿನಾಯ್ತಿ ಕೋರಿ ಕೇಂದ್ರಕ್ಕೆ ಪತ್ರ

ಏಜೆನ್ಸೀಸ್
Published 3 ಏಪ್ರಿಲ್ 2020, 12:48 IST
Last Updated 3 ಏಪ್ರಿಲ್ 2020, 12:48 IST
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್    

ಮಹಾರಾಷ್ಟ್ರ: ಕೊರೊನಾ ಸೋಂಕು ತಡೆಗಟ್ಟಲು ಚಿಕಿತ್ಸೆ ನೀಡುವ ಉಪಕರಣಗಳು ರಾಜ್ಯಕ್ಕೆ ತುರ್ತು ಅಗತ್ಯವಿದ್ದು ಇವುಗಳಿಗೆ ಜಿಎಸ್‌‌ಟಿಯಿಂದ ವಿನಾಯಿತಿ ನೀಡಬೇಕೆಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೇಂದ್ರ ಹಣಕಾಸು ಸಚಿವರನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಪವಾರ್ ಕೊರೊನಾ ರಕ್ಷಣಾ ಕವಚಗಳು, ಉಪಕರಣಗಳು, ಮಾಸ್ಕ್, ವೆಂಟಿಲೇಟರ್ ಸೇರಿದಂತೆ ಅನೇಕ ಬಗೆಯಉಪಕರಣಗಳ ಅಗತ್ಯವಿದೆ. ಇವುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕೆಂದು ಪತ್ರದಲ್ಲಿ ಕೋರಿದ್ದಾರೆ.ಇದಕ್ಕೆ ಉತ್ತರವಾಗಿ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT