ADVERTISEMENT

ಮಹಾರಾಷ್ಟ್ರ, ಹರಿಯಾಣದಲ್ಲಿ ಅ.21ಕ್ಕೆ ಚುನಾವಣೆ, 24ಕ್ಕೆ ಫಲಿತಾಂಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2019, 10:09 IST
Last Updated 17 ಅಕ್ಟೋಬರ್ 2019, 10:09 IST
ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರ
ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರ   

ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ಅ.21ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಮತದಾನ ನಡೆದ ಮೂರೇ ದಿನಕ್ಕೆ ಮತಎಣಿಕೆ ಕಾರ್ಯ ಮುಗಿದು, ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಉಮೇದುವಾರಿಕೆ ಸಲ್ಲಿಸಲು ಅ.4 ಕೊನೆಯದಿನ. ನಾಮಪತ್ರ ಹಿಂಪಡೆಯಲು ಅ.7 ಕೊನೆಯದಿನ. ಲೋಕಸಭಾ ಚುನಾವಣೆ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಗಳು ಇವು. ಹರಿಯಾಣ ವಿಧಾನಸಭೆಯ ಅವಧಿ ನ.2ಕ್ಕೆ ಮತ್ತು ಮಹಾರಾಷ್ಟ್ರ ವಿಧಾನಸಭೆಯ ಅವಧಿ ನ.9ಕ್ಕೆ ಕೊನೆಗೊಳ್ಳಲಿದೆ. ಹರಿಯಾಣದಲ್ಲಿ 1.82 ಕೋಟಿ ಮತ್ತು ಮಹಾರಾಷ್ಟ್ರದಲ್ಲಿ 8.9 ಕೋಟಿ ಮತದಾರರು ಇದ್ದಾರೆ.

ಮಹಾರಾಷ್ಟ್ರದಲ್ಲಿ ಅಭ್ಯರ್ಥಿಗಳು ಖರ್ಚು ಮಾಡುವ ಹಣದ ಮೇಲೆ ನಿಗಾ ಇಡಲುಭಾರತೀಯ ಕಂದಾಯ ಸೇವೆಯ (Indian Revenue Service) ಇಬ್ಬರು ಅಧಿಕಾರಿಗಳನ್ನು ಕಳಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರ ಹೇಳಿದರು.

ADVERTISEMENT

ಇದೇ ಸಂದರ್ಭ ಕರ್ನಾಟಕದ 15 ಸ್ಥಾನಗಳೂ ಸೇರಿ,ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 64 ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಘೋಷಿಸಿದರು. ಚುನಾವಣೆಗಳನ್ನು ಕ್ರಮಬದ್ಧವಾಗಿ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.