
ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ನಗರ ಪರಿಷದ್ ಮತ್ತು ನಗರ ಪಂಚಾಯಿತಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ 24 ಕ್ಷೇತ್ರಗಳ ಚುನಾವಣೆಯನ್ನು ರದ್ದು ಮಾಡಲಾಗಿದೆ. ಈ ಕ್ಷೇತ್ರಗಳಿಗೆ ಡಿ.20ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.
ಫಲಿತಾಂಶವನ್ನು ಡಿ.21ಕ್ಕೆ ಮುಂದೂಡಿ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ಪರಿಷದ್‌ನ 246 ಹಾಗೂ ನಗರ ಪಂಚಾಯಿತಿಯ 42 ವಾರ್ಡ್ ಸೇರಿದಂತೆ 288 ಕಡೆ ಡಿ.2 ರಂದು ಚುನಾವಣೆ ನಡೆಯಿತು. ಡಿ.3ರಂದು ಮತ ಎಣಿಕೆ ನಡೆಯಬೇಕಿತ್ತು. ಆದರೆ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ 24 ಕ್ಷೇತ್ರಗಳ ಚುನಾವಣೆಯನ್ನು ರದ್ದು ಮಾಡಲಾಗಿದ್ದು, ಡಿ.20ಕ್ಕೆ ಇಲ್ಲಿ ಮತದಾನ ನಡೆಯಲಿದೆ.
ಹೀಗಾಗಿ ಡಿ.2ರಂದು ಮತ್ತು 20ರಂದು ಮತದಾನ ನಡೆದ ಬಳಿಕ ಒಟ್ಟಿಗೆ ಡಿ.20ರಂದು ಮತ ಎಣಿಕೆ ಮಾಡುವಂತೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಂಗಳವಾರ ಆದೇಶ ಹೊರಡಿಸಿದೆ.
ಡಿ.2 ರಂದು ನಡೆದ ಚುನಾವಣೆಯ ಫಲಿತಾಂಶವನ್ನು 3ರಂದು ಪ್ರಕಟಿಸಿದರೆ, ಮುಂದೆ ನಡೆಯುವ ಚುನಾವಣೆ ಕುರಿತು ಜನರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಒಂದೇ ಬಾರಿ ಮತ ಎಣಿಕೆ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಹಂತ ಹಂತವಾಗಿ ಫಲಿತಾಂಶವನ್ನು ಪ್ರಕಟಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
ತಿರಸ್ಕೃತ ನಾಮಪತ್ರಗಳಿಗೆ ಸಂಬಂಧಿಸಿದ ಮೇಲ್ಮನವಿಯಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರವಾಗಿ ಮತದಾನವನ್ನು ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.