ADVERTISEMENT

ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆ: ಠಾಕ್ರೆ ಸೋದರರ ಬೆಸೆಯುವುದೇ ಮರಾಠಿ ಅಸ್ಮಿತೆ..?

ಏಜೆನ್ಸೀಸ್
Published 19 ಏಪ್ರಿಲ್ 2025, 14:51 IST
Last Updated 19 ಏಪ್ರಿಲ್ 2025, 14:51 IST
<div class="paragraphs"><p>ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ</p></div>

ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ

   

ಪಿಟಿಐ ಚಿತ್ರಗಳು

ನವದೆಹಲಿ: ‘ಮಹಾರಾಷ್ಟ್ರ ಎಲ್ಲಕ್ಕಿಂತ ಮಿಗಿಲು’ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಸಿ) ಮುಖ್ಯಸ್ಥ ರಾಜ್‌ ಠಾಕ್ರೆ ಅವರ ಪ್ರತ್ಯೇಕ ಹೇಳಿಕೆಗಳು ಇಬ್ಬರು ಸೋದರ ಸಂಬಂಧಿಗಳನ್ನು ಮರಾಠಿ ಅಸ್ಮಿತೆ ಬೆಸೆಯುವುದೇ ಎಂಬ ಚರ್ಚೆ ಹುಟ್ಟುಹಾಕಿದೆ.

ADVERTISEMENT

‘ಮಹಾರಾಷ್ಟ್ರದ ಭಾಷೆ ಮತ್ತು ಸಂಸ್ಕೃತಿಯು ರಾಜಕೀಯ ವೈರತ್ವವನ್ನೂ ಮೀರಿದ್ದು’ ಎಂದು ಈ ಇಬ್ಬರು ನಾಯಕರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ. ಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್‌ ಅವರೊಂದಿಗೆ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿರುವ ರಾಜ್‌ ಠಾಕ್ರೆ, ‘ನನ್ನ ಮತ್ತು ನನ್ನ ಸೋದರ ಸಂಬಂಧಿ ನಡುವಿನ ಭಿನ್ನಾಪ್ರಾಯವು ಮಹಾರಾಷ್ಟ್ರದ ಹಿತದೃಷ್ಟಿಗೆ ಮಾರಕವಾಗಿವೆ ಎಂಬುದು ಸಾಬೀತಾಗಿವೆ’ ಎಂದಿದ್ದಾರೆ.

‘ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಮಹಾರಾಷ್ಟ್ರ ಮತ್ತು ಮರಾಠಿ ಜನರಿಗೆ ದುಬಾರಿಯಾಗಿವೆ. ಜತೆಗೂಡುವುದು ಅಷ್ಟು ಕಷ್ಟದ ಕೆಲಸವಲ್ಲ. ಆದರೆ ಇಚ್ಛೆಯ ವಿಷಯವಷ್ಟೇ. ನನ್ನ ಆಸೆ ಅಥವಾ ಸ್ವಾರ್ಥಕ್ಕೆ ಇದು ಸಂಬಂಧಿಸಿದ್ದಲ್ಲ. ನಾವು ವಿಶಾಲವಾಗಿ ನೋಡುವ ಅಗತ್ಯವಿದೆ. ಎಲ್ಲಾ ರಾಜಕೀಯ ಪಕ್ಷಗಳ ಮರಾಠಿಗರು ಒಂದಾಗಿ ಒಂದು ಪಕ್ಷವನ್ನು ರಚಿಸುವ ಅಗತ್ಯವಿದೆ’ ಎಂದು ಠಾಕ್ರೆ ಹೇಳಿದ್ದಾರೆ.

2005ರಲ್ಲಿ ಶಿವಸೇನಾಯಿಂದ ನಿರ್ಗಮನದಿಂದ ಹಿಡಿದು 2022ರಲ್ಲಿ ಏಕನಾಥ ಶಿಂದೆ ಬಣ ಸೃಷ್ಟಿಯನ್ನೂ ಠಾಕ್ರೆ ಪ್ರಸ್ತಾಪಿಸಿದ್ದಾರೆ. 

'ನಾನು ಶಿವಸೇನಾ ತೊರೆದಾಗ ಶಾಸಕರು ಹಾಗೂ ಸಂಸದರು ನನ್ನೊಂದಿಗೆ ಇದ್ದರು. ಹೀಗಿದ್ದರೂ, ನಾನೊಬ್ಬನೇ ಪಕ್ಷ ತೊರೆದಿದ್ದೆ. ಬಾಳಾಸಾಹೇಬ್‌ ಠಾಕ್ರೆ ಅವರನ್ನು ಹೊರತುಪಡಿಸಿ ಇತರರೊಂದಿಗೆ ಕೆಲಸ ಮಾಡಲು ನನಗೆ ಸಾಧ್ಯವಿರಲಿಲ್ಲ. ಆದರೆ ಉದ್ಧವ್ ಜೊತೆ ಕೆಲಸ ಮಾಡಲು ನನಗೇನೂ ಆಕ್ಷೇಪವಿಲ್ಲ. ಆದರೆ ನನ್ನೊಂದಿಗೆ ಕೆಲಸ ಮಾಡಲು ಅವರಿಗೂ ಮನಸ್ಸಿರಬೇಕಲ್ಲಾ?’ ಎಂದಿದ್ದಾರೆ.

‘ನಾವು ಜೊತೆಯಾಗಿರಬೇಕು ಎಂದು ಮಹಾರಾಷ್ಟ್ರ ಬಯಸಿದರೆ, ಮಹಾರಾಷ್ಟ್ರವೇ ಅದನ್ನು ಹೇಳಬೇಕು. ಇಂಥ ವಿಷಯಗಳಲ್ಲಿ ನನ್ನ ಅಹಂಕಾರವನ್ನು ನಾನು ಬಿಡುವುದಿಲ್ಲ’ ಎಂದಿದ್ದಾರೆ.

ಭಾರತೀಯ ಕಾಮಗಾರ ಸೇನಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಉದ್ಧವ್, ‘ಚಿಕ್ಕ ವ್ಯಾಜ್ಯಗಳನ್ನು ಬದಿಗಿಡಲು ನಾನು ಸಿದ್ಧ. ಮಹಾರಾಷ್ಟ್ರದ ಹಿತಕ್ಕಾಗಿ ಎಲ್ಲಾ ಮರಾಠಿಗರೂ ಒಂದಾಗಬೇಕು. ಕೈಗಾರಿಕೆಗಳನ್ನು ಮಹಾರಾಷ್ಟ್ರದಿಂದ ಗುಜರಾತ್‌ಗೆ ಸ್ಥಳಾಂತರಿಸಿದ್ದನ್ನು ಸಂಸತ್ತಿನಲ್ಲಿ ಪ್ರಶ್ನಿಸಿದಾಗ ಎಲ್ಲಾ ಮರಾಠಿಗರೂ ಜತೆಗೂಡಿದ್ದರೆ, ಉತ್ತಮ ಸರ್ಕಾರವನ್ನು ರಚಿಸಬಹುದಾಗಿತ್ತು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.