ADVERTISEMENT

'ಮಹಾ' ಸಂಪುಟ ವಿಸ್ತರಣೆ: ಡಿಸಿಎಂ ಆಗಿ ಅಜಿತ್, ಸಚಿವರಾಗಿ ಆದಿತ್ಯ ಪ್ರಮಾಣವಚನ

ಏಜೆನ್ಸೀಸ್
Published 30 ಡಿಸೆಂಬರ್ 2019, 8:57 IST
Last Updated 30 ಡಿಸೆಂಬರ್ 2019, 8:57 IST
ಆದಿತ್ಯಾ ಠಾಕ್ರೆ
ಆದಿತ್ಯಾ ಠಾಕ್ರೆ   

ಮುಂಬೈ:ಎನ್‌ಸಿಪಿ ಪಕ್ಷದ ಮುಖಂಡ ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿಮತ್ತು ಶಿವಸೇನಾ ಶಾಸಕ ಆದಿತ್ಯ ಠಾಕ್ರೆ ಸಚಿವರಾಗಿ ಇಂದುಪ್ರಮಾಣ ವಚನ ಸ್ವೀಕರಿಸಿದರು.

ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಮೈತ್ರಿಕೂಟದ ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರದ ಉಪಮುಖ್ಯಮಂತ್ರಿಯಾಗಿ ಅಜಿತ್‌ ಪವಾರ್‌ಪ್ರಮಾಣ ವಚನ ಸ್ವೀಕರಿಸಿದರು. 36 ಸಚಿವರಲ್ಲಿ 26 ಮಂದಿ ಸಂಪುಟ ದರ್ಜೆ ಹಾಗೂ 10 ಮಂದಿರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂಪುಟದಲ್ಲಿ ಕಾಂಗ್ರೆಸ್‌ನ ವರ್ಷಾ ಗಾಯಕ್‌ವಾಡ್ ಮತ್ತುಯಶೋಮತಿ ಠಾಕೂರ್, ಸಿಪಿಎಂನ ಅದಿತಿ ತಟ್ಕರೆಸಚಿವ ಸ್ಥಾನ ಸಿಕ್ಕಿದೆ. ಇದರಲ್ಲಿ ಇಬ್ಬರಿಗೆಸಂಪುಟ ದರ್ಜೆ ಸ್ಥಾನ ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್,ಶಂಕರ್‌ರಾವ್‌ ಚೌಹಾಣ್ ಅವರ ಮಗ ದಿಲೀಪ್‌ ವಾಲ್ಸೆ ಪಾಟೀಲ್‌ (ಎನ್‌ಸಿಪಿ)
ಎನ್‌ಸಿಪಿ ಮುಖಂಡ ದನಂಜಯ್ ಮುಂಡೆ,ಮಹಾ ವಿಕಾಸ್‌ ಅಗಡಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್‌ನ ವಿಜಯ್‌ ವಡೆತ್ತೀವಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ADVERTISEMENT

ಕಳೆದ ತಿಂಗಳು ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಜಿತ್‌ ಪವಾರ್‌ ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆ ಮಾಡಿದ್ದರು. ಆ ಸಂದರ್ಭದಲ್ಲಿ ಬೆಳಗಿನ ಜಾವ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 80 ಗಂಟೆಗಳ ಅವಧಿಯಲ್ಲಿಯೇ ಆ ಸರ್ಕಾರ ಬಿದ್ದಿತ್ತು. ಎರಡು ತಿಂಗಳ ಅವಧಿಯಲ್ಲಿಯೇ ಅಜಿತ್‌ ಪವಾರ್ ಎರಡನೇ ಬಾರಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.