ADVERTISEMENT

ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಸಂಸದ ಓವೈಸಿ ಪ್ರಯಾಣ: ಪೊಲೀಸರು ಮಾಡಿದ್ದೇನು?

ಪಿಟಿಐ
Published 24 ನವೆಂಬರ್ 2021, 8:37 IST
Last Updated 24 ನವೆಂಬರ್ 2021, 8:37 IST
ಅಸಾದುದ್ದೀನ್‌ ಓವೈಸಿ
ಅಸಾದುದ್ದೀನ್‌ ಓವೈಸಿ   

ಮುಂಬೈ: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್‌ ಓವೈಸಿ ಅವರು ಪ್ರಯಾಣಿಸುತ್ತಿದ್,ದನೋಂದಣಿಸಂಖ್ಯೆ ಫಲಕವಿಲ್ಲದ ವಾಹನದ ಚಾಲಕನಿಗೆ ಸೊಲ್ಲಾಪುರ ಪೊಲೀಸರು ₹200 ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಸೊಲ್ಲಾಪುರಕ್ಕೆ ಮಂಗಳವಾರ ಬಂದಿದ್ದ ಓವೈಸಿ ಅವರು, ಸದರ್‌ ಬಜಾರ್‌ದಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ಅಲ್ಲಿ ಕರ್ತವ್ಯದ ಮೇಲಿದ್ದ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್ ರಮೇಶ್‌ಚಿಂತನಕಿಡಿ ಅವರು ವಾಹನಕ್ಕೆ ನೋಂದಣಿ ಸಂಖ್ಯೆ ಫಲಕ ಇಲ್ಲದಿರುವುದನ್ನು ಗಮನಿಸಿ, ಚಾಲಕನಿಗೆ ದಂಡ ವಿಧಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಓವೈಸಿ ಬೆಂಬಲಿಗರು ಸ್ಥಳದಲ್ಲಿ ಜಮಾಯಿಸಿ, ಆಕ್ಷೇಪ ವ್ಯಕ್ತಪಡಿಸಿದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ವಾಹನ ಚಾಲಕನ ವಿರುದ್ಧ ಕ್ರಮ ಜರುಗಿಸಿದ್ದಕ್ಕಾಗಿ ಸೊಲ್ಲಾಪುರ ಪೊಲೀಸ್‌ ಕಮಿಷನರ್ ಹರೀಶ್‌ ಬೈಜಲ್‌ ಅವರು ರಮೇಶ್‌ ಅವರಿಗೆ ₹ 5,000 ಬಹುಮಾನ ನೀಡಿಗೌರವಿಸಿದರು ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.