ADVERTISEMENT

ಫೋರ್ಡ್‌ ಕಂಪನಿಯ ಭಾರತದ ವ್ಯವಹಾರ ಮಹೀಂದ್ರಾ ತೆಕ್ಕೆಗೆ

ಪಿಟಿಐ
Published 1 ಅಕ್ಟೋಬರ್ 2019, 20:01 IST
Last Updated 1 ಅಕ್ಟೋಬರ್ 2019, 20:01 IST
   

ನವದೆಹಲಿ:ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿ ಮತ್ತು ಅಮೆರಿಕದ ಫೋರ್ಡ್‌ ಮೋಟರ್‌ ಕಂಪನಿಯು ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿವೆ. ಇದರಿಂದ ಭಾರತದಲ್ಲಿ ಎರಡೂ ಕಂಪನಿಗಳ ಕಾರುಗಳನ್ನು ಈ ಜಂಟಿ ಪಾಲುದಾರಿಕಾ (ಜೆವಿ) ಕಂಪನಿ ಮಾರಾಟ ಮಾಡಲಿದೆ.

ಈ ಕುರಿತು ಮಂಗಳವಾರ ಘೋಷಣೆ ಮಾಡಿದ ಕಂಪನಿ, ₹657ಕೋಟಿ ಮೊತ್ತದ ಶೇ51ರಷ್ಟು ಪಾಲನ್ನು ಫೋರ್ಡ್‌ನಿಂದ ಪಡೆಯುವ ಮೂಲಕ ಆ ಕಂಪನಿಯ ವಾಹನಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಿ,ಮಾರುಕಟ್ಟೆ ಸೃಷ್ಟಿಸಲಿದೆ ಎಂದು ಹೇಳಿದೆ.

ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಂಟಿ ಪಾಲುದಾರಿಕೆಯ ಕಂಪನಿಯಲ್ಲಿ ಗರಿಷ್ಠ ಈಗ ಹೂಡಿರುವ ₹657ಕೋಟಿಯನ್ನೂ ಒಳಗೊಂಡಂತೆ ₹1400ಕೋಟಿ ಹೂಡಿಕೆ ಮಾಡಲಿದೆ.ಜತೆಗೆ ಭಾರತದಲ್ಲಿರುವ ಫೋರ್ಡ್‌ನ ಎರಡು ತಯಾರಿಕಾ ಘಟಕವೂ ಮಹೀಂದ್ರಾ ಪಾಲಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.