ADVERTISEMENT

ವಿಡಿಯೊ| ಪುರಂದರದಾಸರ ಕೀರ್ತನೆ ಹಾಡಿ ಗಮನಸೆಳೆದ ಬಿಹಾರದ ಯುವ MLA ಮೈಥಿಲಿ ಠಾಕೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2025, 7:41 IST
Last Updated 8 ಡಿಸೆಂಬರ್ 2025, 7:41 IST
<div class="paragraphs"><p>ಬಿಹಾರ ಶಾಸಕಿ ಮೈಥಿಲಿ ಠಾಕೂರ್</p></div>

ಬಿಹಾರ ಶಾಸಕಿ ಮೈಥಿಲಿ ಠಾಕೂರ್

   

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 25ನೇ ವಯಸ್ಸಿನಲ್ಲಿ ಶಾಸಕಿಯಾಗಿ ಆಯ್ಕೆಯಾಗಿರುವ ಮೈಥಿಲಿ ಠಾಕೂರ್, ಸದಾ ಒಂದಿಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಕನ್ನಡದ ಹಾಡು ಹಾಡುವ ಮೂಲಕ ಸುದ್ದಿಯಾಗಿದ್ದಾರೆ.

ದೆಹಲಿಯಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪಾರ್ಥಗಲಿ ಜೀವೋತ್ತಮ್ ಮಠ ಆಯೋಜಿಸಿದ್ದ ‘ಭಜನಾ ಸಂಧ್ಯ’ ಕಾರ್ಯ್ರಮದಲ್ಲಿ ಬರೋಬ್ಬರಿ 2 ಗಂಟೆಗೂ ಅಧಿಕ ಸಮಯ ವಿವಿಧ ಭಾಷೆಯ ಹಾಡುಗಳನ್ನು ಹಾಡುವ ಮೂಲಕ ಗಮನಸೆಳೆದಿದ್ದಾರೆ. ಅದರಲ್ಲೂ ವಿಶೇಷವಾಗಿ ಅವರು ಪುರಂದರರದಾಸರ ಕನ್ನಡದ ಕೀರ್ತನೆಯನ್ನು ಹಾಡಿ ಕನ್ನಡಿಗರ ಮನಗೆದ್ದಿದ್ದಾರೆ.

ADVERTISEMENT

ಪುರಂದರದಾಸರು ರಚಿಸಿರುವ ‘ರಾಮನಾವೆಂಬ ನಾಮವ ನೆನೆದರೆ ಬಯವಿಲ್ಲ ಜಗಕೆ’ ಎಂಬ ಕೀರ್ತನೆಯನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ, ಈ ವಿಡಿಯೊವನ್ನು ಮೈಥಿಲಿ ಠಾಕೂರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.