ADVERTISEMENT

ವರದಿ: ಉತ್ತರ ಪ್ರದೇಶದ ಜೈಲುಗಳಲ್ಲಿ ಹೆಚ್ಚು ಮುಸ್ಲಿಮರು ಹಾಗೂ ದಲಿತರು

ಶೆಮಿಜ್‌ ಜಾಯ್‌
Published 2 ಜನವರಿ 2020, 2:00 IST
Last Updated 2 ಜನವರಿ 2020, 2:00 IST
   

ನವದೆಹಲಿ: ‌ದೇಶದ ಜೈಲುಗಳಲ್ಲಿರುವ ಕೈದಿಗಳ ಪೈಕಿ ಮೂರನೇ ಎರಡರಷ್ಟು ಕೈದಿಗಳು ದಲಿತ, ಬುಡಕಟ್ಟು ಜನಾಂಗ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರು.

ರಾಜ್ಯಗಳ ಪೈಕಿ ಉತ್ತರ ಪ್ರದೇಶದ ಜೈಲುಗಳಲ್ಲಿ ಹೆಚ್ಚು ಮುಸ್ಲಿಮರು ಹಾಗೂ ದಲಿತರು, ಮಧ್ಯಪ್ರದೇಶದ ಜೈಲುಗಳಲ್ಲಿ ಹೆಚ್ಚು ಬುಡಕಟ್ಟು ಜನರು ಕೈದಿಗಳಾಗಿದ್ದಾರೆ. ಬುಧವಾರ ಬಿಡುಗಡೆಯಾಗಿರುವ ‘ಜೈಲುಗಳ ಅಂಕಿ–ಅಂಶ 2018’ ವರದಿಯಲ್ಲಿ ಈ ಮಾಹಿತಿ ಇದೆ.

ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ (ಎನ್‌ಸಿಆರ್‌ಬಿ) 2016 ಹಾಗೂ 2017ರ ವರದಿಗಳಲ್ಲಿ ಧರ್ಮ ಮತ್ತು ಜಾತಿಯ ವಿವರಗಳನ್ನು ನೀಡಿರಲಿಲ್ಲ.

ADVERTISEMENT

2018ರಲ್ಲಿ ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳಲ್ಲಿ ಶೇ 33.49 ಇತರೆ ಹಿಂದುಳಿದ ವರ್ಗದವರು (ಒಬಿಸಿ), ಶೇ 20.68 ಪರಿಶಿಷ್ಟ ಜಾತಿ, ಶೇ 11.56 ಪರಿಶಿಷ್ಟ ಪಂಗಡ ಹಾಗೂ ಶೇ 18.81 ಮುಸ್ಲಿಮರಿದ್ದಾರೆ. 2018ರಲ್ಲಿ ದೇಶದ ಜೈಲುಗಳಲ್ಲಿರುವ ಕೈದಿಗಳ ಒಟ್ಟು ಸಂಖ್ಯೆ 4.66 ಲಕ್ಷ (117.6%). ಇವರಲ್ಲಿ 3.12 ಲಕ್ಷ ಹಿಂದೂಗಳು, 87,673 ಮುಸ್ಲಿಮರು, 16,989 ಸಿಖ್ಖರು ಹಾಗೂ 13,886 ಕ್ರೈಸ್ತರು.

ತುಳುಕುತ್ತಿರುವ ಜೈಲುಗಳು: 2018ರಲ್ಲಿ 3.96 ಲಕ್ಷ ಕೈದಿಗಳನ್ನು ಇರಿಸುವ ಸಾಮರ್ಥ್ಯವನ್ನು ಜೈಲುಗಳು ಹೊಂದಿದ್ದವು. ಆದರೆ ಇದ್ದ ಕೈದಿಗಳ ಸಂಖ್ಯೆ 4.66 ಲಕ್ಷ (117.6%).

ಉತ್ತರ ಪ್ರದೇಶದಲ್ಲಿ 27,459, ಪಶ್ಚಿಮ ಬಂಗಾಳದಲ್ಲಿ 8,401, ಕರ್ನಾಟಕದಲ್ಲಿ 2,798 ಮುಸ್ಲಿಂ ಕೈದಿಗಳಿದ್ದಾರೆ. ಉತ್ತರ ಪ್ರದೇಶದಲ್ಲಿ 24,489, ಮಧ್ಯಪ್ರದೇಶದಲ್ಲಿ 8,935 ಹಾಗೂ ಕರ್ನಾಟಕದಲ್ಲಿ 2,803 ಪರಿಶಿಷ್ಟ ಜಾತಿಗೆ ಸೇರಿದ ಕೈದಿಗಳಿದ್ದಾರೆ.

ಬುಡಕಟ್ಟು ಜನರು

15,500 -ಮಧ್ಯಪ್ರದೇಶದ ಜೈಲಿನಲ್ಲಿರುವ ಬುಡಕಟ್ಟು ಜನರು

6,890 –ಛತ್ತೀಸಗಡಜೈಲಿನಲ್ಲಿರುವ ಬುಡಕಟ್ಟು ಜನರು

ಪರಿಶಿಷ್ಟ ಪಂಗಡ

ಕರ್ನಾಟಕ;1,254 –ಕರ್ನಾಟಕದ ಜೈಲಿನಲ್ಲಿರುವ ಪರಿಶಿಷ್ಟ ಪಂಗಡದ ಜನರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.