ADVERTISEMENT

ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಕೋವಿಡ್:‌ ಶೀಘ್ರ ಚೇತರಿಕೆಗೆ ಹಾರೈಸಿದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2022, 15:00 IST
Last Updated 22 ಜನವರಿ 2022, 15:00 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ:ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೊಲಿ ಅವರಿಗೆ ಕೋವಿಡ್-‌19 ದೃಢಪಟ್ಟಿದೆ. ಇಬ್ರಾಹಿಂ ಅವರು ಚುನಾವಣಾ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ, ಮನೆಯಲ್ಲಿಯೇ ಉಳಿದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇಬ್ರಾಹಿಂ ಅವರು ಶೀಘ್ರ ಗುಣಮುಖರಾಗಲಿ. ಭಾರತವು ಕೋವಿಡ್‌ ಸಂದರ್ಭದಲ್ಲಿ ಸದಾ ಮಾಲ್ಡೀವ್ಸ್‌ ಜೊತೆಗಿರಲಿದೆ ಎಂದು ಭರವಸೆ ನೀಡಿದ್ದಾರೆ. ಭಾರತವು3.12 ಲಕ್ಷ ಡೋಸ್‌ ಲಸಿಕೆಯನ್ನು ಮಾಲ್ಡೀವ್ಸ್‌ಗೆ ಪೂರೈಕೆ ಮಾಡಿದೆ.

'ನಿಮ್ಮ ಶೀಘ್ರ ಚೇತರಿಕೆ ಮತ್ತು ಉತ್ತಮ ಆರೋಗ್ಯಕ್ಕಾಗಿಆಶಿಸುತ್ತೇನೆ. ನಮ್ಮ ಶುಭ ಹಾರೈಕೆಗಳು ನಿಮ್ಮೊಂದಿಗಿರಲಿವೆ ಮತ್ತು ಮಾಲ್ಡೀವ್ಸ್‌ ಜನರು ಕೋವಿಡ್‌ ಸವಾಲನ್ನು ಯಶಸ್ವಿಯಾಗಿ ಮೀರಲಿದ್ದಾರೆ. ನಿಮ್ಮ ಪ್ರಯತ್ನಕ್ಕೆ ಭಾರತವು ಪೂರ್ಣ ಬೆಂಬಲ ಮುಂದುವರಿಸಲಿದ್ದಾರೆ' ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಮಾಲ್ಡೀವ್ಸ್‌ ಜತೆಗಿನ ದ್ವಿಪಕ್ಷೀಯ ಸಂಬಂಧದ ಕುರಿತು ವಿದೇಶಾಂಗ ಸಚಿವ ಎಸ್.‌ ಜೈಶಂಕರ್‌ ಅವರು ಆ ದೇಶದ ಸಚಿವಅಬ್ದುಲ್ಲಾ ಶಾಹಿದ್‌ ಅವರೊಂದಿಗೆ ಹೊಸ ವರ್ಷದಂದು ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.