
ಮಮತಾ ಬ್ಯಾನರ್ಜಿ
ಪಿಟಿಐ ಚಿತ್ರ
ಕೋಲ್ಕತ್ತ: 'ಯಾರಾದರೂ ನನ್ನನ್ನು ರಾಜಕೀಯವಾಗಿ ಸದೆಬಡೆಯಲು ಪ್ರಯತ್ನಿಸಿದರೆ, ರಾಜಕೀಯವಾಗಿ ನಾನು ಮತ್ತೆ ಪುಟಿದೇಳುತ್ತೇನೆ' ಎಂದು ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಎಲ್ಲಾ ಬೆಳವಣಿಗಳ ನಡುವೆ ಶುಕ್ರವಾರ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ತಾನು ತೃಣಮೂಲ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿ ಭಾಗಿಯಾಗಿದ್ದೇನೆ ಹೊರತು ಮುಖ್ಯಮಂತ್ರಿಯಾಗಿ ಅಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿರುವ ಮಮತಾ, ಯಾರಾದರೂ ನನ್ನನ್ನು ರಾಜಕೀಯವಾಗಿ ಸದೆಬಡೆಯಲು ಪ್ರಯತ್ನಿಸಿದರೆ, ರಾಜಕೀಯವಾಗಿ ನಾನು ಮತ್ತೆ ಪುಟಿದೇಳುತ್ತೇನೆ ಜತೆಗೆ ಮರುಜನ್ಮ ಪಡೆಯುತ್ತೇನೆ. 'ನೀವು (ಕೇಂದ್ರ) ಮಹಾರಾಷ್ಟ್ರ, ಹರಿಯಾಣ ಮತ್ತು ಬಿಹಾರವನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದೀರಿ. ಬಂಗಾಳವನ್ನೂ ವಶಪಡಿಸಿಕೊಳ್ಳಬಹುದು ಎಂದು ನೀವು ಭಾವಿಸುತ್ತೀರಾ? ಎಂದು ಪ್ರಶ್ನಿಸಿರುವ ಅವರು, ಇಂತಹ ರಾಜಕೀಯ ದಾಳಿಗಳಿಂದ ನಮ್ಮ ದೃಢಸಂಕಲ್ಪ ಮತ್ತಷ್ಟು ಬಲಪಡುತ್ತದೆ' ಎಂದು ತಿಳಿಸಿದ್ದಾರೆ.
ನಿನ್ನೆ ನಡೆದ ಇ.ಡಿ ದಾಳಿ ವೇಳೆ ಪ್ರತೀಕ್ ಜೈನ್ ನಿವಾಸಕ್ಕೆ ಭೇಟಿ ನೀಡಿದ್ದು ಅನಿರೀಕ್ಷಿತವಾಗಿಯೇ ಹೊರತು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ. ಆದರೆ ನಾನು ಭೇಟಿ ನೀಡುವ ಹೊತ್ತಿಗೆ ಇ.ಡಿ ಅಧಿಕಾರಿಗಳು ಅನೇಕ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮಮತಾ ಆರೋಪಿಸಿದ್ದಾರೆ.
'ಈ ದಾಳಿಯು ಯಾವುದೇ ಹಣಕಾಸಿಗೆ ಸಂಬಂಧಿಸಿದ ದಾಳಿಯಾಗಿಲ್ಲ. ಬದಲಾಗಿ ಅವರು ನನ್ನ ಪಕ್ಷಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯತಂತ್ರ, ಅಭ್ಯರ್ಥಿಗಳ ವಿವರಗಳು ಅದರಲ್ಲಿದ್ದವು. ಹೊತ್ತೊಯುತ್ತಿದ್ದ ಕೆಲವು ದಾಖಲೆಗಳನ್ನು ಮರಳಿ ಪಡೆದುಕೊಂಡಿದ್ದೇನೆ' ಎಂದು ಮಮತಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.