ADVERTISEMENT

ಐದು ಬೆಂಜ್ ಕಾರ್ ಖರೀದಿಸಿ ಹಣಕಾಸು ಕಂಪನಿಗೆ ಟೋಪಿ ಹಾಕಿದ್ದ ವ್ಯಕ್ತಿಯ ಸೆರೆ

ಪಿಟಿಐ
Published 27 ಜನವರಿ 2022, 9:46 IST
Last Updated 27 ಜನವರಿ 2022, 9:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುರುಗ್ರಾಮ: ಐದು ಬೆಂಜ್ ಕಾರ್‌ಗಳನ್ನು ಖರೀದಿಸಿ,ವಾಹನ ಸಾಲ ನೀಡುವ ಹಣಕಾಸು ಕಂಪನಿಯೊಂದಕ್ಕೆ ಸುಮಾರು ₹2.18 ಕೋಟಿ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಗುರುಗ್ರಾಮದ 42 ವರ್ಷದ ಪ್ರಮೋದ್ ಸಿಂಗ್ ಎಂದು ಗುರುತಿಸಲಾಗಿದೆ.

ಪ್ರಮೋದ್ ಸಿಂಗ್ ಈತ ಹಣಕಾಸು ಕಂಪನಿಯನ್ನು ನಂಬಿಸಿ ಐದು ಮರ್ಷಿಡೀಸ್ ಬೆಂಜ್ ಕಾರ್‌ಗಳನ್ನು ಕೊಂಡಿದ್ದ. ಸಾಲ ಪಡೆಯುವಲ್ಲಿ ತನ್ನ ಕೈಚಳಕ ತೋರಿಸಿದ್ದ ಪ್ರಮೋದ್ ಸಿಂಗ್ ಪ್ರಕರಣ ದಾಖಲಾದ ನಂತರ ಮೂರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೊದಲ ಕಾರ್ ತೆಗೆದುಕೊಳ್ಳುವಾಗ ಹಣಕಾಸು ಕಂಪನಿ ನಂಬಿಸಿದ್ದ. ಬಳಿಕ ಮತ್ತೆ ನಾಲ್ಕು ಬೆಂಜ್ ಕಾರ್‌ಗಳನ್ನು ಖರೀದಿಸಿ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದ ಎಂಬ ಆರೋಪ ಹೊರಿಸಲಾಗಿದೆ.

ಈ ಪ್ರಕರಣದಲ್ಲಿ ಪ್ರಮೋದ್ ಸಿಂಗ್ ಜೊತೆ ಸಾರಿಗೆ ಇಲಾಖೆಯ ಕೆಲ ಅಧಿಕಾರಿಗಳೂ ಕೈ ಜೋಡಿಸಿರುವ ಸಾಧ್ಯತೆ ಇದೆ ಎಂದು ಗುರುಗ್ರಾಮದ ಆರ್ಥಿಕ ಅಪರಾಧಗಳ ಜಂಟಿ ಪೊಲೀಸ್ ಆಯುಕ್ತೆ ಚಾಯಾ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.