ADVERTISEMENT

ಮದುವೆಯಾಗಲು ಹಿಂದೂ ಧರ್ಮದವನ ರೀತಿ ಸೋಗು: ಮುಸಲ್ಮಾನ ವ್ಯಕ್ತಿ ಬಂಧನ

ಪಿಟಿಐ
Published 23 ಅಕ್ಟೋಬರ್ 2021, 11:27 IST
Last Updated 23 ಅಕ್ಟೋಬರ್ 2021, 11:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಗಾಂವ್: ಮದುವೆಯಾಗಲು ಹಿಂದೂ ಧರ್ಮದ ಸೋಗು ಧರಿಸಿದ್ದ ಮುಸಲ್ಮಾನ ವ್ಯಕ್ತಿಯನ್ನು ಕೇಂದ್ರ ಅಸ್ಸಾಂ ಹೋಜಾಯ್‌ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಆತನ ಪತ್ನಿ ದೂರು ನೀಡಿದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ (ಡಿಎಲ್ಎಸ್‌ಎ) ನೆರವು ಪಡೆದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು ಎಂದು ಲಂಬ್ಡಿಂಗ್‌ ಠಾಣಾಧಿಕಾರಿ ಎಸ್‌.ಕೆ.ಶರ್ಮಾ ಅವರು ತಿಳಿಸಿದ್ದಾರೆ.

ಮಹಿಳೆಯು ಅಸ್ಸಾಂ ದೀಮಾಜಿ ಜಿಲ್ಲೆಯವರು. ಆರೋಪಿಯು ಲಂಬ್ಡಿಂಗ್‌ ಠಾಣೆಯ ವ್ಯಾಪ್ತಿಯ ನಿವಾಸಿ. ಇಬ್ಬರುತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಪರಿಚಯ ಬೆಳೆದಿತ್ತು. ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡಿದ್ದ ಆತ ಮದುವೆಯಾದ ಬಳಿಕ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಲಾರಂಭಿಸಿದ್ದ. ಒಂದು ಹಂತದಲ್ಲಿ ಹಣದೊಂದಿಗೆ ಪರಾರಿಯಾಗಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ADVERTISEMENT

ಆರೋಪಿಯನ್ನು ಬಂಧಿಸಿದ್ದು, ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಧರ್ಮವನ್ನು ಮುಚ್ಚಿಟ್ಟು ಮದುವೆ ಆಗಿದ್ದು ಇದು, ಲವ್‌ ಜಿಹಾದ್‌ ಪ್ರಕರಣ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.