ADVERTISEMENT

ಶಾಹೀನ್‌ಬಾಗ್‌ ಪ್ರತಿಭಟನಾ ಸ್ಥಳಕ್ಕೆ ನುಗ್ಗಿದ ವ್ಯಕ್ತಿಯ ಕೈಯಲ್ಲಿ ಗನ್!

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 14:51 IST
Last Updated 28 ಜನವರಿ 2020, 14:51 IST
ವಿಡಿಯೊ ದೃಶ್ಯ
ವಿಡಿಯೊ ದೃಶ್ಯ   

ದೆಹಲಿ:ಪೌರತ್ವ ತಿದ್ದುಪಡಿಕಾಯ್ದೆವಿರೋಧಿಸಿ ದೆಹಲಿಯ ಶಾಹೀನ್‌ಬಾಗ್‌ನಲ್ಲಿ ಮಂಗಳವಾರಪ್ರತಿಭಟನೆ ನಡೆಯುತ್ತಿದ್ದಾಗಗನ್ ಹಿಡಿದ ವ್ಯಕ್ತಿಯೊಬ್ಬಪ್ರತಿಭಟನಕಾರರ ನಡುವೆ ನುಗ್ಗಿದ್ದಾನೆ. ವ್ಯಕ್ತಿಯ ಕೈಯಲ್ಲಿ ಗನ್ ಇರುವುದನ್ನು ಗಮನಿಸಿದ ಪ್ರತಿಭಟನಕಾರರು ತಕ್ಷಣವೇ ಅದನ್ನು ವಶ ಪಡಿಸಿಕೊಂಡಿದ್ದಾರೆ.

ಪ್ರತಿಭಟನಕಾರರಲ್ಲಿ ಮಾತನಾಡುವ ಸಲುವಾಗಿ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದ ವ್ಯಕ್ತಿಯ ಕೈಯಲ್ಲಿ ಇದ್ದದ್ದು ಪರವಾನಗಿ ಇರುವ ಗನ್ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಶಸ್ತ್ರಾಸ್ತ್ರ ಹೊಂದಿದ ಸಮಾಜ ದ್ರೋಹಿಯೊಬ್ಬ ಪ್ರತಿಭಟನಕಾರರ ನಡುವೆ ನುಗ್ಗಿದ್ದಾನೆ ಎಂದು ಶಾಹೀನ್‌ಬಾಗ್ ಪ್ರತಿಭಟನೆಯ ಸಂಚಾಲಕರುಪ್ರತಿಕ್ರಿಯಿಸಿದ್ದಾರೆ.

ADVERTISEMENT

ಬಲಪಂಥೀಯ ಗುಂಪುಗಳ ಜನರು ಇಲ್ಲಿ ನುಗ್ಗಿ ದಾಳಿ ನಡೆಸಬಹುದು ಎಂಬ ಬೆದರಿಕೆ ನಮಗಿದೆ. ಈ ಪ್ರತಿಭಟನೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಹಿಂಸಾ ಚಟುವಟಿಕೆಗಳ ವಿರುದ್ದ ನಿಲ್ಲಬೇಕು ಎಂದು ಸಂಚಾಲಕರು ಟ್ವೀಟಿಸಿದ್ದಾರೆ.

ಶಾಹೀನ್‌ಬಾಗ್ ಪ್ರತಿಭಟನಕಾರರುನಿಮ್ಮ ಮನೆಗೆ ನುಗ್ಗಿ ಮಕ್ಕಳು, ಸಹೋದರಿಯರ ಮೇಲೆ ಅತ್ಯಾಚಾರವೆಸಗುತ್ತಾರೆ ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಸೋಮವಾರ ದೆಹಲಿ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್ದೇಶದ್ರೋಹಿಗಳನ್ನು’ ಎಂದು ಕೂಗಿದಾಗ, ನೆರೆದಿದ್ದ ಜನರು ‘ಗುಂಡಿಕ್ಕಿ’ ಕೊಲ್ಲಿ ಎಂದು ಘೋಷಣೆ ಕೂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.