ADVERTISEMENT

ಪ್ರೇಯಸಿಗಾಗಿ ಎಂಬಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನಿಸಿದ ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 28 ಮೇ 2019, 11:19 IST
Last Updated 28 ಮೇ 2019, 11:19 IST
   

ಅಲಿಘಡ: ಪ್ರೇಯಸಿಗಾಗಿ ಎಂಬಿಎ ಪರೀಕ್ಷೆ ಪತ್ರಿಕೆ ಸೋರಿಕೆ ನಡೆಸಲುಯತ್ನಿಸಿದಫಿರೋಜ್ ಆಲಂ ಅಲಿಯಾಸ್ ರಾಜ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

ಅಲಿಘಡದಲ್ಲಿರಾಜಕಾರಣಿಯಾಗಿರುವ ಫಿರೋಜ್‌ನಎಸ್‌ಯುವಿಯಲ್ಲಿ ಬಿಎಸ್‌ಪಿ ಕೋಆರ್ಡಿನೇಟರ್ ಪಟಿಯಾಲಿ ಎಂಬ ನೇಮ್ ಪ್ಲೇಟ್ ಕೂಡಾ ಇದೆ. ಈತನ ಪ್ರೇಯಸಿ ಎಂಬಿಎ ಪರೀಕ್ಷೆ ಬರೆಯುತ್ತಿದ್ದು, ಆಕೆಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಯತ್ನಿಸಿದ್ದರು.

ಅದಕ್ಕಾಗಿ ಎಎಂಯು ನೌಕರ ಇರ್ಷಾದ್ ಎಂಬವರ ಸಹಾಯವನ್ನು ಪಡೆದಿದ್ದರು. ವಿಶ್ವವಿದ್ಯಾನಿಲಯದಲ್ಲಿ ಖಾಯಂ ಕೆಲಸ ಕೊಡಿಸಿವುದಾಗಿ ಫಿರೋಜ್ಇರ್ಷಾದ್‌ಗೆ ಭರವಸೆ ನೀಡಿದ್ದರು ಎನ್ನಲಾಗಿದೆ.

ADVERTISEMENT

ಫಿರೋಜ್ ತನ್ನ ಪ್ರೇಯಸಿಗೆ ಮೊದಲು ನಕಲಿ ಪ್ರಶ್ನೆ ಪತ್ರಿಕೆಯೊಂದನ್ನು ನೀಡಿದ್ದರು. ಆದರೆ ಅದು ನಕಲಿ ಎಂದು ಗೊತ್ತಾದಾಗ ಆಕೆ ಈತನೊಂದಿಗೆ ಮುನಿಸಿಕೊಂಡು ಮಾತು ಬಿಟ್ಟಿದ್ದಳು.

ಇದಾದ ನಂತರ ಹೈದರ್ ಎಂಬ ಗೆಳೆಯನನ್ನು ಭೇಟಿ ಮಾಡಿದ ಫಿರೋಜ್, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಸಂಚು ರೂಪಿಸಿದ್ದನು. ಇವರಿಬ್ಬರೂ ಸೇರಿ ಇರ್ಷಾದ್‌ನ್ನು ಒಪ್ಪಿಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಯತ್ನಿಸಿದ್ದರು.

ಇದೀಗ ಹೈದರ್ ಮತ್ತು ಇರ್ಷಾದ್, ಫಿರೋಜ್ ಜತೆ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಫಿರೋಜ್‌ನ ಪ್ರೇಯಸಿ ತಲೆ ಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.