ಮಂಗಳೂರು: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ಕನಿಷ್ಠ 265 ಮಂದಿ ಮೃತಪಟ್ಟಿದ್ದಾರೆ. ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಅವರ ಹಿರಿಯರು ಮಂಗಳೂರು ಮೂಲದವರು ಎಂದು ಮೂಲಗಳು ತಿಳಿಸಿವೆ.
ಕ್ಲೈವ್ ಅವರ ತಂದೆ ಕ್ಲಿಫರ್ಡ್ ಕುಂದರ್ ಮಂಗಳೂರಿನವರಾಗಿದ್ದು ಮುಂಬೈನ ಕಲಿನಾ ಪ್ರದೇಶದಲ್ಲಿ ವಾಸವಾಗಿದ್ದಾರೆ. ಸದ್ಯ ಅವರ ಸಂಬಂಧಿಕರು ಮಂಗಳೂರು ಭಾಗದಲ್ಲಿ ಇಲ್ಲ ಎಂದೂ ಮೂಲಗಳು ತಿಳಿಸಿವೆ.
ಪೈಲಟ್‌ಗಳಿಬ್ಬರು 9,300 ಗಂಟೆಗಳ ಕಾಲ ವಿಮಾನ ಹಾರಿಸಿದ್ದ ಅನುಭವ ಹೊಂದಿದ್ದರು ಎಂದು ಡಿಜಿಸಿಎ ತಿಳಿಸಿದೆ. ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರು 8,200 ಗಂಟೆ, ಸಹ ಪೈಲಟ್ ಆಗಿದ್ದ ಕ್ಲೈವ್ ಕುಂದರ್ 1,100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು.
ಸಭರ್ವಾಲ್ ಅವರು (ಲೈನ್ ಟ್ರೇನಿಂಗ್ ಕ್ಯಾಪ್ಟನ್–ಎಲ್‌ಟಿಸಿ) ಹೊಸ ಪೈಲಟ್‌ಗಳಿಗೆ ತರಬೇತಿ ನೀಡುವ ಪ್ರಮಾಣೀಕೃತ ಅನುಭವಿ ಪೈಲಟ್ ಕೂಡ ಆಗಿದ್ದರು. ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು ಮೊದಲ ಸಲ ಬಂದಿಳಿದ ವೇಳೆ ಆ ವಿಮಾನದಲ್ಲಿ ಇದ್ದ ಪೈಲಟ್‌ಗಳಲ್ಲಿ ಕ್ಯಾಪ್ಟನ್ ಸಭರ್ವಾಲ್ ಕೂಡ ಒಬ್ಬರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.