ADVERTISEMENT

ಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ‘ಇಂಡಿಯಾ’ ಮುನ್ನಡೆಸಲಿ: ಮಣಿಶಂಕರ್‌ ಅಯ್ಯರ್‌

ಪಿಟಿಐ
Published 24 ಫೆಬ್ರುವರಿ 2026, 1:24 IST
Last Updated 24 ಫೆಬ್ರುವರಿ 2026, 1:24 IST
ಮಣಿಶಂಕರ್‌ ಅಯ್ಯರ್‌
ಮಣಿಶಂಕರ್‌ ಅಯ್ಯರ್‌   

ನವದೆಹಲಿ: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರು ‘ಇಂಡಿಯಾ’ ಕೂಟದ ಸಂಚಾಲಕರಾಗಲು ‘ಸೂಕ್ತ ವ್ಯಕ್ತಿ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಅವರು ಸೋಮವಾರ ಪ್ರತಿಪಾದಿಸಿದರು.

‘ಕೂಟದಲ್ಲಿ ಒಗ್ಗಟ್ಟನ್ನು ಖಾತರಿಪಡಿಸಲು ಪ್ರಾಬಲ್ಯ ಸಾಧಿಸುವ ಪಕ್ಷಕ್ಕಿಂತ ಸಣ್ಣ ಪಕ್ಷದ ನಾಯಕರೊಬ್ಬರು ಆ ಹುದ್ದೆಯಲ್ಲಿ ಕೂರುವುದು ಉತ್ತಮ’ ಎಂದು ಅವರು ಅಭಿಪ್ರಾಯಪಟ್ಟರು. 

‘ಸದ್ಯ 2029ರ ಚುನಾವಣೆಯೇ ನಮ್ಮ ಗುರಿ. ಹೀಗಿದ್ದಾಗ ‘ಇಂಡಿಯಾ’ ಒಕ್ಕೂಟ ಮುನ್ನಡೆಸಲು ಸ್ಟಾಲಿನ್‌ಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಬಲಿಷ್ಠ ‘ಇಂಡಿಯಾ’ ಒಕ್ಕೂಟ ಮಾತ್ರ 2029ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ. ಇಲ್ಲದಿದ್ದರೆ ರಾಹುಲ್‌ ಗಾಂಧಿ ಪ್ರಧಾನಮಂತ್ರಿ ಆಗಲು ಸಾಧ್ಯವಿಲ್ಲ’ ಎಂದೂ ಅವರು ಕಾರಣವನ್ನು ವಿವರಿಸಿದರು.

‘ಮುಂಬರುವ ಚುನಾವಣೆ ಬಳಿಕ ಸ್ಟಾಲಿನ್‌ ಪುತ್ರ ಮತ್ತು ಅವರ ಸಹಚರರು ರಾಜ್ಯ ಸರ್ಕಾರವನ್ನು ಮುನ್ನಡೆಸುತ್ತಾರೆ. ಸ್ಟಾಲಿನ್‌ ಅವರು ಮಾತ್ರ ರಾಷ್ಟ್ರಮಟ್ಟದಲ್ಲಿ ಒಕ್ಕೂಟವನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಹೇಳಿದರು.

ನನ್ನ ಮಿತಿ ಏನೆಂದು ತಿಳಿದಿದೆ. ಆ ವ್ಯಾಪ್ತಿಯಿಂದ ಆಚೆಗೆ ಬರಲಾರೆ. ‘ಇಂಡಿಯಾ’ ಒಕ್ಕೂಟವನ್ನು ಕಾಂಗ್ರೆಸ್ ಮುನ್ನಡೆಸುವುದು ಸೂಕ್ತ
ಎಂ.ಕೆ. ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.