ADVERTISEMENT

ಮಣಿಪುರದಲ್ಲಿ ಸರಣಿ ಭೂಕಂಪ: ಯಾವುದೇ ಸಾವು, ಹಾನಿಯ ವರದಿಯಾಗಿಲ್ಲ

ಪಿಟಿಐ
Published 28 ಮೇ 2025, 11:02 IST
Last Updated 28 ಮೇ 2025, 11:02 IST
ಭೂಕಂಪ 
ಭೂಕಂಪ    

ಇಂಫಾಲ್: ಮಣಿಪುರದಲ್ಲಿ ಬುಧವಾರ ಸರಣಿ ಭೂಕಂಪಗಳು ಸಂಭವಿಸಿದ್ದು, ಅವುಗಳಲ್ಲಿ ಅತ್ಯಂತ ಪ್ರಬಲವಾದದ್ದು 5.2 ತೀವ್ರತೆಯ ಭೂಕಂಪ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಚುರಾಚಂದ್ಪುರ ಜಿಲ್ಲೆಯಲ್ಲಿ ಬೆಳಗಿನ ಜಾವ 1.54ಕ್ಕೆ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅದು ಹೇಳಿದೆ.

ನೋನಿ ಜಿಲ್ಲೆಯಲ್ಲಿ ಬೆಳಗಿನ ಜಾವ 2.26ಕ್ಕೆ 2.5 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದರೆ, ಚುರಾಚಂದ್ಪುರದಲ್ಲಿ ಬೆಳಿಗ್ಗೆ 10.23ಕ್ಕೆ 3.9 ತೀವ್ರತೆಯ ಮೂರನೇ ಭೂಕಂಪ ಸಂಭವಿಸಿದೆ ಎಂದು ಅದು ಹೇಳಿದೆ.

ADVERTISEMENT

ಈವರೆಗೆ ಯಾವುದೇ ಸಾವುನೋವು ಅಥವಾ ಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.