ADVERTISEMENT

ಮಣಿಪುರಕ್ಕೆ ಮೋದಿ ಭೇಟಿ ಸಾಧ್ಯತೆ: ಶಾಸಕರ ಜತೆ ರಾಜ್ಯಪಾಲರ ಸಭೆ 

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 15:51 IST
Last Updated 9 ಸೆಪ್ಟೆಂಬರ್ 2025, 15:51 IST
ಅಜಯ್‌ ಕುಮಾರ್‌ ಭಲ್ಲಾ
ಅಜಯ್‌ ಕುಮಾರ್‌ ಭಲ್ಲಾ   

ಚುರಾಚಾಂದಪುರ/ಇಂಫಾಲ್‌ (ಮಣಿಪುರ) (ಪಿಟಿಐ): ‍ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರವೇ ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಮಣಿಪುರ ರಾಜ್ಯಪಾಲ ಅಜಯ್‌ ಕುಮಾರ್‌ ಭಲ್ಲಾ ಅವರು ಮಂಗಳವಾರ ಕುಕಿ–ಜೊ ಶಾಸಕರ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಚುರಾಚಾಂದಪುರ ಹಾಗೂ ಫರ್ಜಾಲ್‌ ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳ ಶಾಸಕರಾಗಿರುವ ನಾಗುರ್ಸಂಗಲೂರ್ ಸನಾತೆ, ವುಂಗ್‌ಜಾಗಿನ್‌  ವಾಲ್ಟೆ, ಎಲ್‌.ಹಾವೊಪಿಕ್, ಎಲ್‌.ಎಂ. ಖೌಟೆ, ಪಾವೊಲಿಯೆನ್‌ಲಾಲ್ ಹಾವೊಪಿಕ್ ಹಾಗೂ ಚುರಾಚಾಂದಪುರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ತಂಗ್ಲಾಮ್‌ ಹಾವೊಕಿಪ್ ಅವರೊಂದಿಗೆ ಉಪ ಪೊಲೀಸ್‌ ವರಿ‌ಷ್ಠಾಧಿಕಾರಿಗಳ ಕಚೇರಿಯಲ್ಲಿ ಅಜಯ್‌ ಈ ಮಾತುಕತೆ ನಡೆಸಿದ್ದಾರೆ.

ಮೋದಿ ಅವರ ಭೇಟಿಗೆ ಸಂಬಂಧಿಸಿದ ಸಿದ್ಧತೆಗಳ ಕುರಿತಂತೆ ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.