ADVERTISEMENT

ಪಕ್ಷಾಂತರ: ವಿಧಾನಸಭೆ ಪ್ರವೇಶಿಸದಂತೆ ಮಣಿಪುರದ ಏಳು ಶಾಸಕರಿಗೆ ನಿರ್ಬಂಧ

ಪಿಟಿಐ
Published 9 ಜೂನ್ 2020, 6:29 IST
Last Updated 9 ಜೂನ್ 2020, 6:29 IST
   

ಇಂಪಾಲ್: ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಮಣಿಪುರದ ಏಳು ಶಾಸಕರಿಗೆ ವಿಧಾನಸಭೆ ಪ್ರವೇಶಿಸದಂತೆ ಮಣಿಪುರ ಹೈಕೋರ್ಟ್‌ ಸೋಮವಾರ ನಿರ್ಬಂಧ ಹೇರಿದೆ.

ಪಕ್ಷಾಂತರ ನಿಷೇಧ ಕಾಯ್ದೆಯಡಿ ಸಲ್ಲಿಸಲಾಗಿರುವ ದೂರನ್ನು ವಿಧಾನಸಭೆ ಸ್ಪೀಕರ್‌ ಯುಮ್ನಮ್‌ ಖೇಮ್‌ಚಂದ್‌ ಇತ್ಯರ್ಥ ಪಡಿಸುವವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಹೈಕೋರ್ಟ್‌ ತಿಳಿಸಿದೆ.

2017ರ ಚುನಾವಣೆ ನಂತರ ಏಳು ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಪರಿಣಾಮ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ADVERTISEMENT

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಶಾಸಕರು, ಜೂನ್‌ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕಿನಿಂದ ವಂಚಿತರಾಗಲಿದ್ದಾರೆ.

ಈ ಏಳು ಶಾಸಕರನ್ನು ಅನರ್ಹಗೊಳಿಸಲು ಕೋರಿ ಕಾಂಗ್ರೆಸ್ ಮುಖಂಡರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ನಡೆಸಿದ ಹೈಕೋರ್ಟ್‌, ವಿಧಾನಸಭೆಗೆ ಶಾಸಕರ ಪ್ರವೇಶ ನಿರ್ಬಂಧಿಸಿ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.