ADVERTISEMENT

ಮಣಿಪುರ: ಕುಕಿ ಸಮುದಾಯದ ಶಾಸಕರು ಸರ್ಕಾರದ ಭಾಗವಾಗಿಲ್ಲ; ಜೆಎಫ್7 ಸಂಘಟನೆ

ಪಿಟಿಐ
Published 5 ಫೆಬ್ರುವರಿ 2026, 6:51 IST
Last Updated 5 ಫೆಬ್ರುವರಿ 2026, 6:51 IST
ಮಣಿಪುರ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ ವೈ.ಖೇಮಚಂದ್ ಸಿಂಗ್ ಅವರನ್ನು ರಾಜ್ಯಪಾಲ ಅಜಯ್‌ ಕುಮಾರ್‌ ಭಲ್ಲಾ ಅವರು ಅಭಿನಂದಿಸಿದರು –ಪಿಟಿಐ ಚಿತ್ರ
ಮಣಿಪುರ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ ವೈ.ಖೇಮಚಂದ್ ಸಿಂಗ್ ಅವರನ್ನು ರಾಜ್ಯಪಾಲ ಅಜಯ್‌ ಕುಮಾರ್‌ ಭಲ್ಲಾ ಅವರು ಅಭಿನಂದಿಸಿದರು –ಪಿಟಿಐ ಚಿತ್ರ   

ಇಂಫಾಲ್‌: ಬಿಜೆಪಿ ನಾಯಕ ವೈ.ಖೇಮಚಂದ್ ಸಿಂಗ್ ಅವರು ಮಣಿಪುರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೆ ಕುಕಿ ಸಮುದಾಯದ ಸಂಘಟನೆಯೊಂದು ನಮ್ಮ ಶಾಸಕರು ಸರ್ಕಾರದ ಭಾಗವಾಗಿಲ್ಲ ಎಂದ ಹೇಳಿದೆ.

ಹೊಸ ಸರ್ಕಾರ ರಚನೆಯನ್ನು ವಿರೋಧಿಸಿ ಕುಕಿ ಸಮುದಾಯದ ಜೆಎಫ್7 ಸಂಘಟನೆ ಶುಕ್ರವಾರ ಚುರಚಂದಪುರ ಬಂದ್‌ಗೆ ಕರೆ ನೀಡಿದೆ. ಈ ದಿನ ಬೆಳಗ್ಗೆ 6ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಂಪೂರ್ಣ ಬಂದ್‌ ಮಾಡಲಾಗುವುದು ಎಂದು ಹೇಳಿಕೊಂಡಿದೆ. 

ಕುಕಿ ಸಮುದಾಯದ ಮಹಿಳಾ ನಾಯಕಿ, ಬಿಜೆಪಿ ಶಾಸಕಿ ನೆಮ್ಚಾ ಕಿಪ್ಗೆನ್ ಹಾಗೂ ನಾಗಾ ಪೀಪಲ್ಸ್ ಫ್ರಂಟ್‌ನ ಶಾಸಕರಾದ ಎಲ್‌. ದಿಖೂ ಅವರೂ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ADVERTISEMENT

ನೆಮ್ಚಾ ಕಿಪ್ಗೆನ್ ಅವರು ಸರ್ಕಾರದ ಭಾಗವಾಗಿಲ್ಲ ಎಂದು ಹೇಳಿಕೊಂಡಿದ್ದು, ಸರ್ಕಾರ ಮುಂದುವರೆಯಬಾರದು ಎಂದು ಜೆಎಫ್7 ಸಂಘಟನೆ ಆಗ್ರಹಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.