ಪ್ರಾತಿನಿಧಿಕ ಚಿತ್ರ
ಇಂಫಾಲ: ಮಣಿಪುರದ ನಿಷೇಧಿತ ಸಂಘಟನೆಗಳಿಗೆ ಸೇರಿದ 12 ಮಂದಿ ಉಗ್ರರುಸೇರಿದಂತೆ ಇಬ್ಬರು ಶಸ್ತ್ರಾಸ್ತ್ರ ವ್ಯಾಪಾರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಪೂರ್ವ ಇಂಫಾಲ ಜಿಲ್ಲೆಯಲ್ಲಿ ಉಗ್ರರನ್ನು ಬಂಧಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಶನ್ ಆರ್ಮಿಯ ನಾಲ್ವರು ಕಾರ್ಯಕರ್ತರು, ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ ಇಬ್ಬರು ಸದಸ್ಯರು, ಕಾಂಗ್ಲೀ ಯಾವೋಲ್ ಕನ್ನಾ ಲುಪ್‌ನ ಒಬ್ಬ ಸದಸ್ಯ, ಕೆಸಿಪಿ (ಪಿಡಬ್ಲ್ಯೂಜಿ)ಯ ಇಬ್ಬರು ಸದಸ್ಯರನ್ನು, ಪ್ರೆಪಾಕ್‌ನ ಇಬ್ಬರು ಕಾರ್ಯಕರ್ತರನ್ನು ತೌಬಲ್‌ನ ಲಿಲಾಂಗ್ ನುಂಗೈ ಹಾಗೂ ಕೊಯಿರೆಂಗೈ ಕಬುಯಿ ಖುಲ್ ಗೇಟ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್‌ನ (ಪಂಬೈ ಗುಂಪು) ಮತ್ತೊಬ್ಬ ಸಕ್ರಿಯ ಉಗ್ರನನ್ನು ಇಂಫಾಲ್ ಪೂರ್ವದ ಪುಹ್ಖಾವೊ ಅಹಲ್ಲಪ್ ಮಖಾ ಲೈಕೈನಿಂದ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರಿಂದ ರೈಫಲ್‌ಗಳು, ಸ್ವಯಂ ಲೋಡಿಂಗ್ ರೈಫಲ್‌ಗಳು, ಮದ್ದುಗುಂಡುಗಳು, ಗುಂಡು ನಿರೋಧಕ ಜಾಕೆಟ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.