ಪ್ರಾತಿನಿಧಿಕ ಚಿತ್ರ
ಇಂಫಾಲ: ಮಣಿಪುರದ ಬಿಷ್ಣುಪುರ, ಇಂಫಾಲ ಪಶ್ಚಿಮ ಮತ್ತು ಇಂಫಾಲ ಪೂರ್ವ ಜಿಲ್ಲೆಗಳಲ್ಲಿ ಮೂರು ನಿಷೇಧಿತ ಸಂಘಟನೆಗಳಿಗೆ ಸೇರಿದ ಐದು ಉಗ್ರಗಾಮಿಗಳನ್ನು ಸುಲಿಗೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದಡಿ ಭದ್ರತಾ ಪಡೆಗಳು ಬಂಧಿಸಿವೆ.
ಕಾಂಗಲೇಯಿಪಾಕ್ ಕಮ್ಯುನಿಸ್ಟ್ ಪಾರ್ಟಿ (ಪಿಡಬ್ಲ್ಯುಜಿ), ಯುಎನ್‌ಎಲ್‌ಎಫ್, ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಸದಸ್ಯರನ್ನು ಸ್ಫೋಟಕಗಳ ಸಮೇತ ಬಂಧಿಸಲಾಗಿದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಷ್ಣುಪುರ ಜಿಲ್ಲೆಯಲ್ಲಿ ಯುಎನ್‌ಎಲ್‌ಎಫ್‌ನ ಸಕ್ರಿಯ ಕಾರ್ಯಕರ್ತರ 50 ವರ್ಷದ ಥೌಡಮ್ ಬಾಬಿ ಸಿಂಗ್‌ನನ್ನು ಬಂಧಿಸಲಾಗಿದ್ದು, ಆತನ ಬಳಿ 303 ರೈಫಲ್, ಐದು ಮ್ಯಾಗಜೀನ್‌ಗಳು, ಒಂದು ಹ್ಯಾಂಡ್ ಗ್ರೆನೇಡ್, ವಿವಿಧ ಕ್ಯಾಲಿಬರ್‌ಗಳ 501 ಮದ್ದುಗುಂಡುಗಳು ಸೇರಿದಂತೆ ಇತರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2023ರಲ್ಲಿ ಯುಎನ್‌ಎಲ್‌ಎಫ್ (ಪಿ) ಸಂಘಟನೆಯು ಕೇಂದ್ರ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದಾಗ್ಯೂ, ಇದರ ಕಾರ್ಯಕರ್ತರನ್ನು ಸುಲಿಗೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಬಳಕೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಿಯಿಂದಾಗಿ ಬಂಧಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಿಎಲ್‌ಎ, ಕೆಸಿಪಿ ಹಾಗೂ ಕವೈಕೆಎಲ್ ಹಾಗೂ ಯುಎನ್‌ಎಲ್‌ಎಫ್ ಸಂಘಟನೆಗಳಿಗೆ ಸೇರಿದ ಆರು ಬಂಡುಕೋರರನ್ನು ತೌಬಾಲ್ ಮತ್ತು ಪೂರ್ವ ಇಂಫಾಲ್ ಜಿಲ್ಲೆಗಳಲ್ಲಿ ಭಾನುವಾರ ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.